

ಕಾಸರಗೋಡು: ಜಿಲ್ಲಾ ವಾರ್ತಾ ಮತ್ತು ಮಾಹಿತಿ ಇಲಾಖೆ ಹಾಗೂ ತಾಲೂಕು ಕಚೇರಿ ಜಂಟಿಯಾಗಿ ಆಯೋಜಿಸಿದ್ದ, ಆಡಳಿತ ಭಾಷಾ ಸಪ್ತಾಹದ ಸಮಾರೋಪ ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್‌ನಲ್ಲಿ ಜರುಗಿತು.
ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಕಾರ್ಯಕ್ರಮ ಉದ್ಘಾಟಿಸಿದರು. ಹೊಸದುರ್ಗ ತಹಸೀಲ್ದಾರ್ ಟಿ.ಜಯಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ನಗರಸಭಾ ಕಾರ್ಯದರ್ಶಿ ಮನೋಜ್ ಕುಮಾರ್, ಹಸಿರು ಕೇರಳ ಮಿಷನ್ ಕಾಞಂಗಾಡ್ ಬ್ಲಾಕ್ ಸಂಯೋಜಕ ಬಾಲಚಂದ್ರನ್ ಮಾಸ್ಟರ್, ಭೂದಾಖಲೆ ವಿಭಾಗ ತಹಸೀಲ್ದಾರ್ ಶಶಿಕುಮಾರ್, ಕಾಞಂಗಾಡು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು, ಕೌನ್ಸಿಲರ್‌ಗಳು, ತಾಲೂಕು ಕಚೇರಿ ನೌಕರರು, ಗ್ರಾಮಾಧಿಕಾರಿಗಳು, ಸಿವಿಲ್ ಸ್ಟೇಷನ್ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ಕೇಂದ್ರ ಕಚೇರಿ ಉಪ ತಹಸೀಲ್ದಾರ್ ಕೆ.ಬಾಬು ವಂದಿಸಿದರು.