ಸಂಘಗಳ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮ ಅಗತ್ಯ

IMG-20240905-WA0338
Published on

ಸಾಲಿಗ್ರಾಮ: ಸಂಘ ಸಂಸ್ಥೆಗಳು ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿಯಾಗಬೇಕಾದರೆ ಷೇರುದಾರರು, ಆಡಳಿತ ಮಂಡಳಿ ಶ್ರಮ ಅಗತ್ಯ ಎಂದು ಗ್ರಾಮೀಣ ನಿಧಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಶ್ಯಾಮ ಸುಂದರ್ ಹೇಳಿದರು.


ಪಟ್ಟಣದ ಗ್ರಾಮೀಣ ನಿಧಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸೊಸೈಟಿ ಐದು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಭಾಗದ ಸಾರ್ವಜನಿಕರ ನಂಬಿಕೆ, ವಿಶ್ವಾಸ ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಮೈಸೂರು-ಕೊಡಗು ಜಿಲ್ಲಾ ಸಂಯೋಜಕ ಎಸ್.ಆರ್.ಸುರೇಶ್ ಮಾತನಾಡಿ, ಸಾರ್ವಜನಿಕರು ಖಾಸಗಿ ಸಹಭಾಗಿತ್ವದ ಸಂಸ್ಥೆಗಳಲ್ಲಿ ಹಣಕಾಸು ವ್ಯವಹಾರ ಮಾಡುವ ಬದಲು ಸಹಕಾರ ಸಂಸ್ಥೆಗಳಲ್ಲಿ ನಡೆಸಿದರೆ ಸಹಕಾರ ಕ್ಷೇತ್ರದ ಪ್ರಗತಿಗೆ ಕೈಜೋಡಿಸಬಹುದು ಎಂದರು.


ಸೊಸೈಟಿಯ ಮೋಹನ್ ಕುಮಾರ್ ಮಾತನಾಡಿ, ಸಾಲಿಗ್ರಾಮದ ಪ್ರಧಾನ ಕಚೇರಿ ಜತೆಗೆ ಕೆ.ಆರ್.ನಗರ ಪಟ್ಟಣದಲ್ಲಿ ಶಾಖೆ ಆರಂಭಿಸಲಾಗಿದೆ ಎಂದರು.


ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಉಪಾಧ್ಯಕ್ಷೆ ನೇತ್ರಾವತಿ ಸುರೇಶ್, ನಿರ್ದೇಶಕರಾದ ಎಂ.ಎಸ್.ನರಸಿಂಹ, ಕುಮಾರ್, ಶಶಿಕುಮಾರ್, ಶಿವರಾಜ್ ಕುಮಾರ್, ಮಹದೇವ, ರಾಜೇಶ್, ಮಂಜುಳಾ ಕನಕರಾಜ್, ಭಾಗ್ಯಾ ಗುರುರಾಜ್, ರೇಣುಕೇಶ್, ಮಂಜುನಾಥ್, ಶ್ರುತಿ ಶ್ರೀನಿವಾಸಗೌಡ, ಸಿಇಒ ಮಮತಾ ಜಯಕೃಷ್ಣ, ಸಿಂಧು ಮಂಜುನಾಥ್, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net