ಕುಂದುಕೊರತೆ ಸಭೆ ಮುಂದೂಡಿಕೆ

ಕುಂದುಕೊರತೆ ಸಭೆ ಮುಂದೂಡಿಕೆ
Published on

ಹುಣಸೂರು: ಹುಣಸೂರು ಉಪವಿಭಾಗ ಮಟ್ಟದ ಜೀತವಿಮುಕ್ತರ ಕುಂದುಕೊರತೆ ಸಭೆಯನ್ನು ಅಧಿಕಾರಿಗಳ ಗೈರಿನಿಂದಾಗಿ ಗುರುವಾರಕ್ಕೆ ಮುಂದೂಡಲಾಯಿತು.

ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಜೀತವಿಮುಕ್ತರ ಕುಂದುಕೊರತೆ ಸಭೆಯಲ್ಲಿ ಸಮಿತಿಯ ಸದಸ್ಯರನ್ನು ಹೊರತುಪಡಿಸಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಇದ್ದರು. ಇದನ್ನು ಸಮಿತಿಯ ಸದಸ್ಯ ಜೀವಿಕ ಸಂಸ್ಥೆಯ ಬಸವರಾಜು, ಸದಸ್ಯ ನಿಂಗರಾಜ ಮಲ್ಲಾಡಿ ಆಕ್ಷೇಪಿಸಿದರು. ಜೀತವಿಮುಕ್ತರ ನೋವು ನಲಿವುಗಳು, ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಮತ್ತು ಪರಿಹಾರವನ್ನು ಬಯಸಿ ಬಂದಿದ್ದೇವೆ. ಆದರೆ ಇಲ್ಲಿ ಪರಿಹಾರ ನೀಡಬೇಕಾದ ಅಧಿಕಾರಿಗಳೇ ಬೇಜವಾಬ್ದಾರಿ ವರ್ತನೆ ತೋರಿರುವುದು ಸರಿಯೇ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಗೆ ವಿವಿಧ ಇಲಾಖೆಗಳನ್ನು ಆಹ್ವಾನಿಸಿರುವ ದಾಖಲೆಗಳನ್ನು ಗಮನಿಸಿದ ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಜೀತವಿಮುಕ್ತರ ಸಭೆಯ ಕುರಿತು ಇಂತಹ ಬೇಜವಾಬ್ದಾರಿಯನ್ನು ನಾನು ಸಹಿಸುವುದಿಲ್ಲ. ಸಭೆಗೆ ಉತ್ತರ ನೀಡಬೇಕಾದ ಅಧಿಕಾರಿಗಳೇ ಇಲ್ಲದೆ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ. ಸಭೆಗೆ ಗೈರಾದ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿರಿ. ಸಭೆಯನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಆಯೋಜಿಸೋಣ. ದಯವಿಟ್ಟು ಎಲ್ಲರೂ ಸಹಕರಿಸಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net