

ಬೆಂಗಳೂರು: ಯಾತ್ರಾ ಕ್ಷೇತ್ರದಲ್ಲಿ ಮೂರು ದಶಕಗಳ ಸಮಗ್ರ ಅನುಭವ ಹೊಂದಿರುವ ಅಡಿಗಾಸ್ ಸಂಸ್ಥೆಯು ಈ ಬಾರಿಯ ಪಿತೃಪಕ್ಷಕ್ಕೆ (ಸೆ. 7ರಿಂದ 21) ವಿಶೇಷ ಯಾತ್ರಾ ಆರಂಭಿಸಿದೆ.
ಈ ಯಾತ್ರೆಯಲ್ಲಿ 2 ಆಯ್ಕೆಗಳಿದ್ದು, ಮೊದಲನೆಯದು 9 ದಿನಗಳ ಕಾಶಿ, ಗಯಾ, ಪ್ರಯಾಗ್, ಅಯೋಧ್ಯಾ, ಚಿತ್ರಕೂಟ ಹಾಗೂ ನೈಮಿಷಾರಣ್ಯ ಕ್ಷೇತ್ರಗಳನ್ನು ಒಳಗೊಂಡಿದೆ. ಎರಡನೆಯದು 6 ದಿನಗಳ ಕಾಶಿ, ಗಯಾ, ಪ್ರಯಾಗ್ ಹಾಗೂ ಅಯೋಧ್ಯಾ ಕ್ಷೇತ್ರಗಳನ್ನು ಹೊಂದಿದೆ.
ಯಾತ್ರೆ ಸಂದರ್ಭದಲ್ಲಿ ಕ್ಷೇತ್ರದ ವಿಧಿವಿಧಾನಗಳ ಪ್ರಕಾರ ಶ್ರಾದ್ಧಕಾರ್ಯ, ಸಂಸ್ಥೆಯ ನುರಿತ ಬಾಣಸಿಗರಿಂದ ಸಾಂಪ್ರದಾಯಿಕ ಶ್ರಾದ್ಧದ ಊಟ ಮತ್ತು ಉಪಾಹಾರಗಳ ವ್ಯವಸ್ಥೆ, ಕನ್ನಡ ಬಲ್ಲ ಕ್ಷೇತ್ರ ಪುರೋಹಿತರಿಂದ ವಿಧಿವಿಧಾನಗಳು, ಪ್ರಯಾಣಕ್ಕೆ ಹವಾನಿಯಂತ್ರಿತ- ಸುಖಾಸೀನ ಬಸ್ಸುಗಳ ವ್ಯವಸ್ಥೆ, ಹವಾನಿಯಂತ್ರಿತ ಹೋಟೆಲ್ ಕೊಠಡಿಗಳಲ್ಲಿ ರಾತ್ರಿ ವಾಸ್ತವ್ಯ, ಅನುಭವಿ ಟೂರ್ ಮ್ಯಾನೇಜರ್‌ಗಳ ಮೇಲ್ವಿಚಾರಣೆ ಹಾಗೂ ಸ್ಥಳೀಯ ಗೈಡ್‌ಗಳ ನೇಮಕ ವ್ಯವಸ್ಥೆಗಳನ್ನು ಯಾತ್ರೆ ಒಳಗೊಂಡಿರುತ್ತದೆ.
ಸೀಮಿತ ಅವಧಿಯಲ್ಲಿ ಈ ಯಾತ್ರೆಗೆ ಬೇಡಿಕೆ ಹೆಚ್ಚಿದ್ದು, ಸೀಮಿತ ಸೀಟುಗಳ ಲಭ್ಯತೆ ಇರುವುದರಿಂದ ಯಾತ್ರಿಕರು ಕೂಡಲೇ ತಮ್ಮ ಸೀಟುಗಳನ್ನು ಕಾದಿರಿಸಬೇಕೆಂದು ಅಡಿಗಾಸ್ ಸಂಸ್ಥೆಯ ಸಂಸ್ಥಾಪಕ ಕೆ. ನಾಗರಾಜ್ ಅಡಿಗ ಅವರು ಕೋರಿದ್ದಾರೆ.
ಪಿತೃಪಕ್ಷದ ವೈಶಿಷ್ಟ್ಯ
ಭಾರತದ ಸನಾತನ ಧರ್ಮಾಚರಣೆಗಳಲ್ಲಿ ಋಣ ಸಂದಾಯಕ್ಕೆ ಅತ್ಯಂತ ಪವಿತ್ರ ಹಾಗೂ ಶ್ರೇಯಸ್ಕರ ಕಾಲವೇ ಪಿತೃಪಕ್ಷ. ನಮ್ಮ ಜನ್ಮಕ್ಕೆ ಕಾರಣರಾಗಿ, ಲಾಲಿಸಿಪಾಲಿಸಿ, ನಮ್ಮ ಉದ್ಧಾರಕ್ಕೆ ಶ್ರಮಿಸಿ ನಮ್ಮನ್ನಗಲಿದ ತಂದೆ- ತಾಯಿ, ಗುರು- ಹಿರಿಯರನ್ನು ಸ್ಮರಿಸಿ ಅವರಿಗೆ ತರ್ಪಣದ ಮೂಲಕ ಕೃತಜ್ಞತೆ ಸಲ್ಲಿಸುವ ವಿಧಿಯೇ ಶ್ರಾದ್ಧ ಕಾರ್ಯ.
ಇಲ್ಲಿ ಸಂಪರ್ಕಿಸಿ
ಮಾಹಿತಿ ಮತ್ತು ಬುಕಿಂಗ್‌ಗಾಗಿ ಅಡಿಗಾಸ್ ಸಂಸ್ಥೆ, ಬೆಂಗಳೂರಿನ ಬಸವನಗುಡಿ, ವಿಜಯನಗರ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಹಾಗೂ ಹುಬ್ಬಳ್ಳಿಯ ಶಾಖೆಗಳಿಗೆ ಭೇಟಿ ನೀಡಿ.