ಸಮಾಜದ ಪ್ರಗತಿಗೆ ಎಲ್ಲರೂ ಶ್ರಮಿಸೋಣ : ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋನಾಯಕ

0812KLB05
Published on

ಜಗತ್ ಬಡಾವಣೆಯ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಆದಿ ಬಣಜಿಗ ಸಮಾಜದಿಂದ  ಗಣ್ಯರಿಗೆ ಸನ್ಮಾನ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಸಮಾಜದ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರೂ ತನು, ಮನ, ಧನದಿಂದ ಶ್ರಮಿಸೋಣ. ಅಂದಾಗಲೇ ಸಮುದಾಯ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ ಹೇಳಿದರು.

ಜಗತ್ ಬಡಾವಣೆಯ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಆದಿ ಬಣಜಿಗ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದ ಸಾಧಕರು ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸಮಾಜಕ್ಕಾಗಿ ದುಡಿಯಲು ಸಿದ್ಧನಿz್ದೆÃನೆ. ಯಾವುದೇ ಜವಾಬ್ದಾರಿ ಕೊಟ್ಟರೂ ಪ್ರಾಮಾಣಿಕವಾಗಿ ನಿಭಾಯಿಸುವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪ್ರಭಾರಿ ಅಧ್ಯP್ಷÀ ಜಗನ್ನಾಥ ಶೇಗಜಿ ಮಾತನಾಡಿ, ನಮ್ಮಲ್ಲಿ ಹೋರಾಟ ಮನೋಭಾವದ ಕೊರತೆಯಿದ್ದು, ಎಲ್ಲರೂ ಸಮಾಜಕ್ಕೆ ಶ್ರಮಿಸಬೇಕು. ಸೌಲಭ್ಯ ಪಡೆಯುವುದಕ್ಕಾಗಿ ಹೋರಾಡುವುದು ಅವಶ್ಯವಾಗಿದೆ. ಒಗ್ಗಟ್ಟಾಗಿ ಸಮಾಜವನ್ನು ಮುನ್ನಡೆಸೋಣ, ನಮ್ಮವರಿಗೆ ಸದಾ ಬೆನ್ನುಲುಬಾಗಿರೋಣ ಎಂದು ಅಭಿಪ್ರಾಯಪಟ್ಟರು.

ಸಮಾಜದ ಜಿ¯್ಲÁಧ್ಯP್ಷÀ ಶಿವಪುತ್ರಪ್ಪ ಬರುಡೆ, ಉಪಾಧ್ಯP್ಷÀ ಶಿವಪುತ್ರಪ್ಪ ಮುನ್ನಳಿ, ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ ಸೋಮಶೇಖರ ಟೆಂಗಳಿ, ಸಿದ್ಧಲಿಂಗೇಶ್ವರ ಬುಕ್ ಡಿಪೋ ಮಾಲೀಕ ಬಸವರಾಜ ಕೊನೆಕ್, ಜಿಪಂ ಮಾಜಿ ಸದಸ್ಯ ರಾಜೇಂದ್ರ ಕರೆಕಲ್, ಗ್ರಾಪಂ ಮಾಜಿ ಅಧ್ಯP್ಷÀ ಶಾಮರಾವ ಪಾಟೀಲï, ಕುಡಾ ಮಾಜಿ ಆಯುಕ್ತ ದಯಾನಂದ ಪಾಟೀಲ್, ನಿವೃತ್ತ ಜೈಲರ್ ಬಸವರಾಜ ಜಿ. ಪಾಟೀಲï, ಪ್ರಮುಖರಾದ ಅಮೃತಗೌಡ ಪಾಟೀಲ್ ಕೊಳಕೂರ, ರಾಜು ನವಲ್ದಿ, ಮಹಾದೇವಪ್ಪ ಪಾಟೀಲ್ ತಂಬಾಕವಾಡಿ, ಪ್ರಕಾಶ ಪಾಟೀಲï ಹೀರಾಪುರ, ಶಿವಪುತ್ರಪ್ಪ ಮೆಗಪ್ಪಗೊಳ್ಳ, ಶಾಂತಕುಮಾರ ದುಧನಿ, ಅಣ್ಣಾರಾವ ಬಿರಾದಾರ, ಶಾಂತಪ್ಪ ಪಾಟೀಲ್, ಶರಣಬಸಪ್ಪ ಚಿಕ್ಕಲಿ, ಬಸವರಾಜ ನೆಲ್ಲೂರ, ಶಿವರಾಜ ಕೋಟನೂರ, ವೀರೇಶ ಪಾಟೀಲ್ ಉಪಳಾಂವ, ದಯಾನಂದ ಪಾಟೀಲ್, ರಾಜಕುಮಾರ ಉದನೂರ, ರವಿ ದೇಗಾಂವ್, ಗುಂಡೆರಾವ್ ಪದ್ಮಾಜಿ, ಚಂದ್ರು ಬೆಳಮಗಿ, ವಿಜಯಲಕ್ಹಿö್ಮÃ ಪಾಟೀಲï ಇತರರಿದ್ದರು.

ಸಾಧಕರಿಗೆ ಗೌರವ ಸನ್ಮಾನ

ರಾಜ್ಯ ಸರ್ಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸೋಮಶೇಖರ ಗೋನಾಯಕ್, ಗುತ್ತಿಗೆದಾರರ ಸಂಘದ ಪ್ರಭಾರಿ ಅಧ್ಯಕ್ಷ ಜಗನ್ನಾಥ ಶೇಗಜಿ, ಕಲಬುರಗಿ ಕೇಂದ್ರ ಕಾರಾಗೃಹದ ಸಂದರ್ಶಕರ ಮಂಡಳಿ ಸದಸ್ಯೆ ಕರುಣಾದೇವಿ ಪಾಟೀಲ್, ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯP್ಷÀ ಗುಪ್ತಲಿಂಗ ಪಾಟೀಲ್, ಅತ್ಯುತ್ತಮ ಕನ್ನಡ ಶಾಲೆ ಪ್ರಶಸ್ತಿ ಪುರಸ್ಕೃತ ಶಾಲೆಯ ಲಕ್ಷಿö್ಮÃಪುತ್ರ ರಾಂಪೂರೆ ಝಳಕಿ ಹಾಗೂ ಆದಿ ಬಣಜಿಗ ಸಮಾಜದ ಜಿಲ್ಲಾ, ತಾಲೂಕು ಘಟಕದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net