ಗೆಜ್ಜೆಗಿರಿಯಲ್ಲಿ ಆದಿದೈವ ಧೂವಾವತಿ ನೇಮ

6
Published on

ಪುತ್ತೂರು ಗ್ರಾಮಾಂತರ: ದೇಯಿ ಬೈದ್ಯೆತಿ, ಕೋಟಿ-ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನಬಿತ್ತ್‌ಲ್ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಕ್ಷೇತ್ರದ ಆದಿದೈವ ಧೂವಾವತಿ ನೇಮ ವಿಜೃಂಭಣೆಯಿಂದ ನಡೆಯಿತು.

ಕ್ಷೇತ್ರದಲ್ಲಿ ಬೆಳಗ್ಗೆ ಮೂಡುಬಿದಿರೆಯ ಶಿವಾನಂದ ಶಾಂತಿ ನೇತೃತ್ವದಲ್ಲಿ ಗಣಪತಿ ಹೋಮ, ಗುರುಪೂಜೆ, ದೈವಸಾನ್ನಿಧ್ಯದಲ್ಲಿ ಶುದ್ಧಿಕಲಶ ನಡೆದು ಧೂಮಾವತಿ ದೈವದ ಭಂಡಾರ ಇಳಿದು, ಧೂಮಾವತಿ ದೈವದ ನೇಮ ಆರಂಭಗೊಂಡಿತು. ದೈವದ ಪ್ರಸಾದ ವಿತರಣೆ, ಮಹಾಪೂಜೆ ನಡೆಯಿತು.

ಸಂಜೆ ಧೂಮಾವತಿ ಬಲಿ ಉತ್ಸವ, ಮಹಾಪೂಜೆಯ ಬಳಿಕ ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿಯುವ ಕಾರ್ಯಕ್ರಮ, ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ ನಡೆಯಿತು. ಬಳಿಕ ಕುಪ್ಪೆ ಪಂಜುರ್ಲಿ ನೇಮ ಆರಂಭಗೊಂಡಿತು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೌರವಾಧ್ಯಕ್ಷರಾದ ಪೀತಾಂಬರ ಹೇರಾಜೆ, ಜಯಂತ ನಡುಬೈಲು, ಮೊಕ್ತೇಸರ ಶ್ರೀಧರ ಪೂಜಾರಿ ಗೆಜ್ಜೆಗಿರಿ, ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್ ಕೆ.ಬಿ., ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಕೋಶಾಧಿಕಾರಿ ಮೋಹನ್‌ದಾಸ ವಾಮಂಜೂರು, ಕಾರ್ಯದರ್ಶಿ ಜಯ ವಿಕ್ರಮ್ ಕಲ್ಲಾಪು, ಪ್ರಮುಖರಾದ ಶಿವಾನಂದ ಕೋಟ್ಯಾನ್ ಮಸ್ಕತ್, ಶಿವಪ್ಪ ಪೂಜಾರಿ ಮುಂಬೈ, ರಾಜೇಂದ್ರ ಚಿಲಿಂಬಿ, ಸತೀಶ್ ಕುವಾರ್ ಕೆಡೆಂಜಿ, ಹರೀಶ್ ಕೆ.ಪೂಜಾರಿ ಮಂಗಳೂರು, ಜನಾರ್ದನ ಪೂಜಾರಿ ಪದಡ್ಕ, ಕೆ.ಟಿ.ಪೂಜಾರಿ, ಜಯರಾಮ್ ಬಂಗೇರ ಹೇರಾಜೆ, ಚಂದ್ರಹಾಸ ಅಮೀನ್, ಸುಜಿತ ಬಂಗೇರ, ನಾರಾಯಣ ಮಚ್ಚಿನ, ಶಶಿಧರ ಕಿನ್ನಿಮಜಲು, ರಮಣಿ ಕೋಡಿಕಲ್, ವಿಜಯ ಕುಮಾರ್ ಸುರತ್ಕಲ್ ಮತ್ತಿತರರಿದ್ದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೋಮವಾರ ಗೆಜ್ಜೆಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net