ಆದಿಶಕ್ತಿ ದೇವಿಯ ತೆಪ್ಪೋತ್ಸವ

Dharmaraya temple
Published on

ಬೆಂಗಳೂರು: ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವತಿಯಿಂದ ಬೆಂಗಳೂರಿನ ಸಂಪಂಗಿರಾಮನಗರ ಹಸಿ ಕರಗ ಮಂಟಪದ ಕಲ್ಯಾಣಿಯಲ್ಲಿ ಶನಿವಾರ (ಆ.31) ಸಂಜೆ 6 ಗಂಟೆಗೆ ಏಳು ಸುತ್ತಿನ ಕೋಟೆ ಶ್ರೀ ಆದಿಶಕ್ತಿ ದೇವಿ ಹಾಗೂ ಶ್ರೀ ಅರ್ಜುನ ದ್ರೌಪದಿ ಸ್ವಾಮಿ ಸಹಿತ ಶ್ರೀ ಮುತ್ಯಾಲಮ್ಮ ದೇವಿಯ ತೆಪ್ಪೋತ್ಸವ ಜರುಗಲಿದೆ.

ಅಂದು ಬೆಳಗ್ಗೆಯಿಂದಲೇ ಶ್ರೀ ಧರ್ಮರಾಯಸ್ವಾಮಿ ದೇಗುಲದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ದೇವಾಲಯದಿಂದ ಕಲ್ಯಾಣಿವರೆಗೂ ದೇವರುಗಳ ಮೆರವಣಿಗೆ ಸಾಗಲಿದೆ. ಸಂಜೆ ವಿಶೇಷ ಅಲಂಕಾರದೊಂದಿಗೆ ಎಲ್ಲ ದೇವರುಗಳ ತೆಪ್ಪೋತ್ಸವ ನಡೆಯಲಿದೆ. ಈ ವೇಳೆ ಪಾಲ್ಗೊಳ್ಳುವ ಎಲ್ಲ ಮಹಿಳೆಯರಿಗೆ ಸೀರೆ, ಅರಿಶಿನ ಕುಂಕುಮ ಸಹಿತ ಬಾಗಿನ ನೀಡಲಾಗುವುದು.

ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಸಹ ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತೆಪ್ಪೋತ್ಸವವನ್ನು ಯಶಸ್ವಿಗೊಳಿಸಿಕೊಡುವಂತೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸತೀಶ್ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net