ಗುರುಗಳ ಸಿದ್ಧಾಂತ ಪಾಲನೆ

narayanaguru
ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ನಾರಾಯಣ ಪೂಜಾರಿ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಕೋಟ
ನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಬದಲಾವಣೆ ಸಾಧ್ಯ. ಗುರುಗಳ ಸಿದ್ಧಾಂತ ಒಂದೇ ಜಾತಿ, ಮತ, ದೇವರು ಎಂದಾಗಿತ್ತು ಎಂದು ಬಿಲ್ಲವ ಸಂಘದ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಹೇಳಿದರು.

ಮಂಗಳವಾರ ಬಾಳ್ಕುದ್ರು ಹಂಗಾರಕಟ್ಟೆ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘದ ಸದಸ್ಯರಿಂದ ಭಜನೆ, ಸತ್ಯನಾರಾಯಣಪೂಜೆ ಹಾಗೂ ನಾರಾಯಣ ಗುರುಗಳ ಗುರುಪೂಜೆ, ಮಹಾಮಂಗಳಾರತಿ ನಡೆಯಿತು.

ಬಿಲ್ಲವ ಸಂಘದ ಗೌರವಾಧ್ಯಕ್ಷ ವಾಸುದೇವ ಕೋಟ್ಯಾನ್, ಸಂಘದ ಅಧ್ಯಕ್ಷ ವಿಜಯ್ ಪೂಜಾರಿ, ಹಿರಿಯರಾದ ಕುಷ್ಟ ಗುರಿಕಾರ, ಶೀನಪ್ಪ ಅಮೀನ್, ಶಾರದಾ ಪೂಜಾರಿ, ಗುಲಾಬಿ, ರಾಜುಪೂಜಾ, ಶಕುಂತಲಾ ವಾಸುದೇವ ಕೋಟ್ಯಾನ್, ಆರ್ಚಕ ಶಂಕರ ಪೂಜಾರಿ ಬಾಳ್ಕುದ್ರು ಸದಸ್ಯರಾದ ರವೀಂದ್ರ ಸುವರ್ಣ, ಆನಂದ ಪೂಜಾರಿ, ಸುಭಾಸ್ ಪೂಜಾರಿ, ಸತೀಶ್ ಪೂಜಾರಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net