ಕೋಟ ಜನತಾ ಸಮೂಹ ಸಂಸ್ಥೆ ಸ್ವಾತಂತ್ರ್ಯೋತ್ಸವ

swatantryotsava
ಕೋಟ ಜನತಾ ಸಮೂಹ ಸಂಸ್ಥೆಯ ಮುಖ್ಯ ಆಡಳಿತ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಭಾರತೀಯ ಸೇನೆ ನಿವೃತ್ತ ಯೋಧ ಯೋಗೀಶ ಕಾಂಚನ್ ಅವರನ್ನು ಗೌರವಿಸಲಾಯಿತು.
Published on

ಕೋಟ: ಕೋಟ ಜನತಾ ಸಮೂಹ ಸಂಸ್ಥೆ ಮುಖ್ಯ ಆಡಳಿತ ಕಚೇರಿಯಲ್ಲಿ ಸ್ವಾತಂತ್ರೊೃೀತ್ಸವ ಆಚರಣೆಯಲ್ಲಿ ಕೆ.ಇ.ಬಿ ಲೈನ್‌ಮನ್, ಭಾರತೀಯ ಸೇನೆ ನಿವೃತ್ತ ಯೋಧ ಯೋಗೀಶ ಕಾಂಚನ್ ಅವರನ್ನು ಗೌರವಿಸಲಾಯಿತು.

ಗೀತಾನಂದ ಫೌಂಡೇಷನ್ ವತಿಯಿಂದ ವಾರಂತ್ಯದಲ್ಲಿ ಗಿಡ ನೆಡುವ ಸಂಸ್ಥೆ ವ್ಯವಸ್ಥಾಪಕ ಶ್ರೀನಿವಾಸ ನೇತೃತ್ವದ ತಂಡ, ಸಂಸ್ಥೆ ವತಿಯಿಂದ ನಡೆಸಲ್ಪಡುವ ಜನತಾ ಪ್ರೊಪೆಷನಲ್ ಎಂಪ್ಲಾಯ್ ಕೋರ್ಸ್‌ನ್ನು ಮುಗಿಸಿದವರನ್ನು ಗೌರವಿಸಲಾಯಿತು. ಸಂಸ್ಥೆ ಮುಖ್ಯ ಆಡಳಿತ ನಿರ್ದೇಶಕ ಆನಂದ ಸಿ.ಕುಂದರ್, ನಿರ್ದೇಶಕ ರಕ್ಷಿತ್ ಕುಂದರ್, ಜನತಾ ಪರಿವಾರ ಸದಸ್ಯರಾದ ಗೀತಾ ಎ.ಕುಂದರ್, ಅಶೋಕ್ ಕುಂದರ್, ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಮತ್ತು ಸಂಸ್ಥೆ ಮುಖ್ಯ ಮಾನವ ಸಂಪನ್ಮೂಲಾಧಿಕಾರಿ ಎಂ.ಎಸ್.ಕೃಷ್ಣ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಧಾನೇಶ್ ಜೀವಾನಿ, ಎಜಿಎಂ ಶ್ರೀನಿವಾಸ್ ಕುಂದರ್ ಉಪಸ್ಥಿತರಿದ್ದರು. ಸಂಸ್ಥೆ ಸಿಬ್ಬಂದಿ ಪ್ರಕಾಶ್ ನಿರೂಪಿಸಿ. ಸಂಸ್ಥೆ ವ್ಯವಸ್ಥಾಪಕ ಮಿಥುನ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net