ರಾಜ್ಯದಲ್ಲಿ ಶೇ.16 ಹೆಚ್ಚುವರಿ ಮಳೆ

BKT RAIN NEWS
Published on

ಬೆಂಗಳೂರು: ರಾಜ್ಯದಲ್ಲಿ ಕಳೆದ 60 ವರ್ಷಗಳಲ್ಲಿಯೇ ಉತ್ತಮ ಮಳೆಯಾಗಿದ್ದು, 227 ತಾಲೂಕುಗಳ ಪೈಕಿ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಮಾತ್ರ ಕಡಿಮೆ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ 852 ಮಿಮೀ ಮಳೆ ಆಗುತ್ತದೆ, ಆದರೆ ಈ ಬಾರಿ 991 ಮಿಮೀ ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ.16 ಅಧಿಕವಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.39, ಉತ್ತರ ಒಳನಾಡಿನಲ್ಲಿ ಶೇ.36, ಕರಾವಳಿಯಲ್ಲಿ ಶೇ.12 ಹೆಚ್ಚುವರಿ ಮಳೆಯಾಗಿದ್ದರೆ, ಮಲೆನಾಡಿನಲ್ಲಿ ಶೇ.5 ಕಡಿಮೆಯಾಗಿದೆ.

ಮಳೆ ಹಾನಿ

*133 ಜೀವಹಾನಿ

*5 ಜನ ನಾಪತ್ತೆ

*514 ಪ್ರಾಣಿಗಳ ಸಾವು

*6742 ಜನರ ರಕ್ಷಣೆ

*108 ಪರಿಹಾರ ಕೇಂದ್ರಗಳ ಸ್ಥಾಪನೆ

*4,94,048 ಹೆಕ್ಟೇರ್ ಬೆಳೆ ಹಾನಿ

ಮೂಲ ಸೌಕರ್ಯ ಹಾನಿ

* 21173 ಕಿಮೀ ರಸ್ತೆ

* 2758 ಸೇತುವೆ

* 786 ಕೆರೆಗಳು

*18533 ವಿದ್ಯುತ್ ಕಂಬ, 3974 ಕಿಮೀ ವಿದ್ಯುತ್ ಮಾರ್ಗ, 2023 ಟ್ರಾನ್ಸ್​ಫಾರ್ಮರ್

* 2139 ಶಾಲಾ ಕಟ್ಟಡ

* 1427 ಅಂಗನವಾಡಿ ಕಟ್ಟಡ

* 103 ಪ್ರಾಥಮಿಕ ಆರೋಗ್ಯ ಕೇಂದ್ರ

* 219 ಕುಡಿಯುವ ನೀರಿನ ಯೋಜನೆಗಳು

* 118 ಶೌಚಾಲಯ

ರಾಜ್ಯದಲ್ಲಿ 2008ರ ನಂತರ ಒಟ್ಟಾರೆ ಅತ್ಯಂತ ಹೆಚ್ಚಿನ ಮಳೆಯಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ 59 ವರ್ಷಗಳ ನಂತರ ಹೆಚ್ಚಿನ ಮಳೆ ಬಿದ್ದಿದೆ. ಚಿತ್ರದುರ್ಗ ಜಿಲ್ಲೆ 1960ರ ನಂತರ ಶೇ.79 ಹೆಚ್ಚಿನ ಮಳೆಯನ್ನು ಕಂಡಿದೆ.

ನೈರುತ್ಯ ಮುಂಗಾರು ಹಂಗಾಮಿನಲ್ಲಿ 122 ದಿನಗಳನ್ನು ಮಳೆ ದಿನಗಳೆಂದು ಗುರುತಿಸಲಾಗುತ್ತದೆ. ಈ ಬಾರಿ 50 ದಿನಗಳು ಮಳೆ ಬಂದಿದೆ. 2010ರಲ್ಲಿ 52 ದಿನಗಳು ಮಳೆ ಬಿದ್ದಿತ್ತು. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ 46 ದಿನಗಳ ಕಾಲ ಮಳೆ ಬಂದಿದ್ದು, 1960 ನಂತರ ಇದು ಮೊದಲು. ಈ ವಲಯದಲ್ಲಿ ಸರಾಸರಿ 32 ಮಳೆ ದಿನ ಇರುತ್ತದೆ, ಆದರೆ ಈ ಬಾರಿ 14 ದಿನ ಹೆಚ್ಚಾಗಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ 36 ದಿನ ಮಳೆ ಬಂದಿದೆ. 60 ವರ್ಷಗಳಲ್ಲಿ ಮೂರನೇ ಅತಿಹೆಚ್ಚು. ಈ ವಲಯದಲ್ಲಿ ಸರಾಸರಿ 26 ದಿನ ಇರುತ್ತದೆ. ರಾಜ್ಯದಲ್ಲಿ ಸರಾಸರಿ 40 ಮಳೆ ದಿನ ಇರುತ್ತಿದ್ದವು, ಆದರೆ ಈ ಬಾರಿ 10 ದಿನಗಳ ಕಾಲ ಹೆಚ್ಚಿಗೆ ಮಳೆ ಬಂದಿದೆ. ಮಳೆನಾಡಿನಲ್ಲಿ ಸರಾಸರಿ 59 ಮಳೆ ದಿನಗಳಿರುತ್ತವೆ. ಈ ಬಾರಿ 64 ದಿನ ಆಗಿದೆ. ಕರಾವಳಿಯಲ್ಲಿ ಸರಾಸರಿ 85 ಮಳೆ ದಿನ ಇರುತ್ತವೆ, ಆದರೆ ಈ ಬಾರಿ 95 ದಿನ ಆಗಿದೆ ಎಂದು ನೈಸರ್ಗಿಕ ವಿಕೋಪ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net