ಕರೊನಾ ಭೀತಿಯಿಂದ ಬಾವಿಗೆ ಹಾರಿದ ಫೋಟೊಗ್ರಾಫರ್: ಶವ ಎತ್ತಲು ಹಿಂಜರಿದ ಅಗ್ನಿಶಾಮಕ ಸಿಬ್ಬಂದಿ!

Commits Suicide Web
Published on

ಕಾರ್ಕಳ: ಕರೊನಾ ಪಾಸಿಟಿವ್ ವರದಿ ಹಿನ್ನೆಲೆಯಲ್ಲಿ ಭಯಗೊಂಡ ನಗರದ ಮಾರ್ಕೆಟ್ ರಸ್ತೆ ಮನೆ ನಿವಾಸಿ, ಫೋಟೊಗ್ರಾಫರ್ ಪ್ರಸನ್ನ (45) ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರೂ, ಕರೊನಾ ಕಾರಣಕ್ಕೆ ಶವ ಮೇಲಕ್ಕೆತ್ತಲು ಹಿಂಜರಿದರು. ಬಳಿಕ ಪಡುಬಿದ್ರಿಯ ಆಸಿಫ್ ಎಂಬುವರು ಬಾವಿಯಲ್ಲಿಳಿದು ಶವವನ್ನು ಮೇಲಕ್ಕೆತ್ತಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net