ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

20.ktal.04
ಕವಿತಾಳ ಸಮೀಪದ ಅಮೀನಗಡದಲ್ಲಿ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
Published on

ಕವಿತಾಳ: ಲಿಂಗಸುಗೂರಿನ ಶಾಲಾ-ಕಾಲೇಜ್‌ಗಳಿಗೆ ತೆರಳುವ ವಿದ್ಯಾರ್ಥಿಗಳು ಅಮೀನಗಡದಲ್ಲಿ ಸೋಮವಾರ ಬಸ್‌ಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಹಲವು ಬಸ್‌ಗಳಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶ ಇರಲಿಲ್ಲ. ಇದರಿಂದಾಗಿ ಹಣಗಿ, ಕವಿತಾಳ ಹಾಗೂ ವಟಗಲ್ ಗ್ರಾಮದ ವಿದ್ಯಾರ್ಥಿಗಳು ಬಸ್‌ಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ತರಗತಿಗಳು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಸರಿಯಾದ ಸಮಯಕ್ಕೆ ತಲುಪಲು ಬಸ್‌ಗಳ ವ್ಯವಸ್ಥೆ ಇಲ್ಲ. ಹೀಗಾಗಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳು ಬರುವವರೆಗೆ ಬಸ್ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಕವಿತಾಳ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್‌ನಲ್ಲಿ ಜಾಗ ಇದ್ದರೂ ಸಮಸ್ಯೆ ಮಾಡುತ್ತಿದ್ದೀರಿ. ನಿಮಗೆ ಸಮಸ್ಯೆಯಾದರೆ ನಮಗೆ ತಿಳಿಸಿ ಎಂದು ತಾಕೀತು ಮಾಡಿದರು. ಪ್ರಮುಖರಾದ ಮಂಜೂರು, ಶೊಯೇಬ್, ಮಹಾದೇವ, ಬುಡ್ಡಪ್ಪ, ಅಮರೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net