ಗುರುಪುರದಲ್ಲಿ ಎನ್‌ಎಚ್ ಪರಿಹಾರ ಪಾವತಿ ಅದಾಲತ್

17
Published on

ಗುರುಪುರ: ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಪಾವತಿ ಅದಾಲತ್ ಬುಧವಾರ ಗುರುಪುರ ಗ್ರಾಪಂ ಸಭಾಗೃಹದಲ್ಲಿ ನಡೆಯಿತು.

ಹೆದ್ದಾರಿ ಕಾಮಗಾರಿಗಾಗಿ ಎನ್‌ಎಚ್‌ಐಎ ಮಂಗಳೂರಿನಿಂದ ಸಾಣೂರುವರೆಗೆ 18 ಗ್ರಾಮಗಳಲ್ಲಿ ಭೂಸ್ವಾಧೀನ ಮಾಡಿದೆ. ಕೆಲವು ತಿಂಗಳಿಂದ ಪ್ರಾಧಿಕಾರ ಗ್ರಾಪಂ ಮಟ್ಟದಲ್ಲಿ ಅದಾಲತ್ ನಡೆಸಿ ಪರಿಹಾರ ಮೊತ್ತದ ಮಾಹಿತಿ ನೀಡುತ್ತಿದೆ. ಗುರುಪುರ ಪಂಚಾಯಿತಿ ಸಭಾಗಹೃದಲ್ಲಿ ಮಾರ್ಚ್ 20ರಂದು ನಡೆದ ಅದಾಲತ್‌ನಲ್ಲಿ 3,47,42,618 ರೂ ಹಾಗೂ ಮಾರ್ಚ್ 27ರಂದು ನಡೆದ ಅದಾಲತ್‌ನಲ್ಲಿ 4,02,78,481 ರೂ. ಒದಗಿಸಲಾಗಿದ್ದು, ‘ಭೂಮಿ ರಾಶಿ’ ಪೋರ್ಟಲ್ ಮೂಲಕ ಭೂಮಾಲೀಕರ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಆಯುಕ್ತ ಮೊಹಮ್ಮದ್ ಇಸಾಕ್ ತಿಳಿಸಿದರು.

ಬುಧವಾರ ನಡೆದ ಅದಾಲತ್ ವೇಳೆ ಗುರುಪುರಕ್ಕೆ ಆಸುಪಾಸಿನ ಐದಾರು ಗ್ರಾಮಗಳ ಭೂಮಾಲೀಕರು ದಾಖಲೆಗಳೊಂದಿಗೆ ಆಗಮಿಸಿದ್ದು, ಸಂಜೆ 5 ಗಂಟೆಯವರೆಗೆ ಅದಾಲತ್ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net