ಕಲಾವಿದರಿಗೆ ಫುಡ್​ ಕಿಟ್​ ವಿತರಿಸಿದ ಲೀಲಾವತಿ, ವಿನೋದ್​ರಾಜ್​

vinodraj
Published on

ಬೆಂಗಳೂರು : ಕರೊನಾ ಪರಿಸ್ಥಿತಿಯಿಂದ ಕೆಲಸಕ್ಕೆ ಅವಕಾಶವಿಲ್ಲದ ಈ ಸಮಯದಲ್ಲಿ ಚಿತ್ರರಂಗದ ಜ್ಯೂನಿಯರ್ ಆರ್ಟಿಸ್ಟ್‌ಗಳಿಗೆ ಹಿರಿಯ ನಟಿ ಲೀಲಾವತಿ ಮತ್ತು ಪುತ್ರ ನಟ ವಿನೋದ್ ರಾಜ್ ನೆರವಾಗಿದ್ದಾರೆ. ಬೆಂಗಳೂರಿನ ಸುಮನಹಳ್ಳಿ ಬಳಿ ವಾಸಿಸುತ್ತಿರುವ 200 ಕಲಾವಿದರ ಕುಟುಂಬಗಳಿಗೆ ಇಂದು ಆಹಾರ ಕಿಟ್​ಗಳನ್ನು ವಿತರಿಸಿದ್ದಾರೆ.

ತಾವೇ ಸಂಕಷ್ಟದಲ್ಲಿದ್ದರೂ ಇತರ ಕಲಾವಿದರ ನೆರವಿಗೆ ನಿಂತು ತಾಯಿ-ಮಗ ಮಾನವೀಯತೆ ಮೆರೆದಿದ್ದಾರೆ. ಚಿತ್ರರಂಗದಿಂದ ದೂರ ಉಳಿದರೂ, ಕಿರಿಯ ಕಲಾವಿದರಿಗೆ ಸಹಾಯಹಸ್ತ ಚಾಚುತ್ತಿರುವ ಲೀಲಾವತಿ ಮತ್ತು ಪುತ್ರ ವಿನೋದ್​ ರಾಜ್, ಕೃಷಿ ಚಟುವಟಿಕೆಯಿಂದ ಬಂದ ಆದಾಯದಲ್ಲಿ ಕಲಾವಿದರಿಗೆ ಫುಡ್​ ಕಿಟ್​​ ಪಡೆದು ವಿತರಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net