More

    ಹಿಂದೂ ಮಹಾಸಾಗರಕ್ಕೆ ಬಿದ್ದ ಚೀನಾ ರಾಕೆಟ್​ ಅವಶೇಷ

    ನವದೆಹಲಿ/ಬೀಜಿಂಗ್ : ಚೀನಾದ ಅತಿದೊಡ್ಡ ರಾಕೆಟ್‌ ‘ಲಾಂಗ್ ಮಾರ್ಚ್ 5 ಬಿ’ಯ ಅವಶೇಷಗಳು ಇಂದು ಬೆಳಿಗ್ಗೆ ಹಿಂದೂ ಮಹಾಸಾಗರಕ್ಕೆ ಬಂದು ಬಿದ್ದಿವೆ. ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ ನಂತರ ಈ ರಾಕೆಟ್​​ನ ಹೆಚ್ಚಿನ ಭಾಗಗಳು ನಾಶವಾದವು ಮತ್ತು ಉಳಿದ ಅವಶೇಷಗಳು ಮಾಲ್ಡೀವ್ಸ್ ದ್ವೀಪಸಮೂಹದ ಪಶ್ಚಿಮಕ್ಕೆ ಹಿಂದೂ ಸಾಗರದ ಪಾಲಾಗಿವೆ. ಅವುಗಳಿಂದ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಹೇಳಿದ್ದಾರೆಂದು ಚೀನಾ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

    ಲಾಂಗ್ ಮಾರ್ಚ್ 5 ಬಿಯ ಭಾಗಗಳು ಬೀಜಿಂಗ್ ಸಮಯ ಬೆಳಿಗ್ಗೆ 10:24 ಕ್ಕೆ (02:24 ಜಿಎಂಟಿ) ಮತ್ತೆ ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ ಲಾಂಗಿಟ್ಯೂಡ್​ 72.47 ಡಿಗ್ರಿ ಪೂರ್ವ ಮತ್ತು ಲಾಟಿಟ್ಯೂಡ್​ 2.65 ಡಿಗ್ರಿ ಉತ್ತರಕ್ಕೆ ಬಂದಿಳಿದವು ಎಂದು ಚೀನಾ ಮ್ಯಾನ್ಡ್ ಸ್ಪೇಸ್ ಎಂಜಿನಿಯರಿಂಗ್ ಕಛೇರಿ ಹೇಳಿದೆ ಎನ್ನಲಾಗಿದೆ. ಏಪ್ರಿಲ್ 29 ರಂದು ಚೀನಾದ ಹೈನಾನ್ ದ್ವೀಪದಿಂದ ಲಾಂಚ್​ ಆಗಿದ್ದ ಈ ರಾಕೆಟ್​​ನ ಅವಶೇಷಗಳು ಎಲ್ಲಿಗೆ ಬಂದು ಬೀಳುತ್ತವೆ ಎಂಬ ಕುತೂಹಲ ಮತ್ತು ಕಾಳಜಿ ಹಲವು ದೇಶಗಳ ಬಾಹ್ಯಾಕಾಶ ವಿಜ್ಞಾನಿಗಳ ನಿದ್ದೆ ಕೆಡಿಸಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಲಡಾಖ್ ಪ್ರದೇಶದಲ್ಲಿ ಹಿಡಿತ ಬಲಪಡಿಸುತ್ತಿದೆ ಚೀನಾ ಸೇನೆ ?!

    ಕಳೆದ ವಾರ ಲಾಂಚ್​ ಮಾಡಲಾಗಿದ್ದ ಲಾಂಗ್​ ಮಾರ್ಚ್​ ರಾಕೆಟ್​, ಚೀನಾದ ಹೊಸ ಸ್ಪೇಸ್​ ಸ್ಟೇಷನ್​ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ 5ಬಿ ಸರಣಿಯ ಎರಡನೇ ವಾಹನವಾಗಿತ್ತು. ಕಳೆದ ವರ್ಷ ಇದೇ ತೆರನ ರಾಕೆಟ್​ ಮೇ 2020 ರಲ್ಲಿ ಲಾಂಚ್​ ಆಗಿದ್ದಾಗ ಅದರ ಅವಶೇಷಗಳು ಐವರಿ ಕೋಸ್ಟ್​​ನ ಮೇಲೆ ಬಿದ್ದು ಹಲವು ಕಟ್ಟಡಗಳಿಗೆ ಹಾನಿ ಮಾಡಿತ್ತು. ಆದ್ದರಿಂದ ಈ ಬಾರಿ ಚೀನಾ ರಾಕೆಟ್​ ಹಾರಿಸಿದಾಗಿನಿಂದ ಅದರ ಅವಶೇಷಗಳು ಎಲ್ಲಿಗೆ ಬಂದು ಬೀಳುತ್ತವೆ ಎಂದು ಹಲವು ದೇಶಗಳು ಗಮನಿಸುತ್ತಿದ್ದವು ಎನ್ನಲಾಗಿದೆ.

    ಈ ರಾಕೆಟ್​ಅನ್ನು ಟ್ರ್ಯಾಕ್​ ಮಾಡುತ್ತಿದ್ದ ಅಮೆರಿಕದ ಸ್ಪೇಸ್​ ಕಮ್ಯಾಂಡ್​, “ನಿಯಂತ್ರಣ ಕಳೆದುಕೊಂಡ ಚೀನಾದ ಲಾಂಗ್ ಮಾರ್ಚ್​ 5ಬಿ ರಾಕೆಟ್​ ಇಂಡಿಯಾ ಟೈಮ್​ ಭಾನುವಾರ ಬೆಳಿಗ್ಗೆ 7.45 ಕ್ಕೆ ಅರೇಬಿಯನ್​ ಪೆನಿನ್ಸುಲಾವನ್ನು ಪ್ರವೇಶಿಸಿದೆ” ಎಂದು ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. 100 ಅಡಿ ಎತ್ತರ ಮತ್ತು 22 ಮೆಟ್ರಿಕ್ ಟನ್​ ತೂಕದ ರಾಕೆಟ್​ ಅವಶೇಷಗಳು ಬಿದ್ದಿವೆ ಎಂದು ಅಮೆರಿಕ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. (ಏಜೆನ್ಸೀಸ್)

    ಆ್ಯಂಟಿ ಕೋವಿಡ್​ ಡ್ರಗ್​ ರೂಪಿಸಿದ ಡಿಆರ್​ಡಿಒ ! ತುರ್ತು ಬಳಕೆಗೆ ಅನುಮೋದನೆ

    ಜೈಲಿನಲ್ಲಿ ಜನದಟ್ಟಣೆ : ಚಿಕ್ಕ ಅಪರಾಧಗಳಲ್ಲಿ ಬಂಧನ ಬೇಡ ಎಂದ ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts