

ಮೈಸೂರು: ತೆಲುಗು ನಟ ರಾಮ್ ಚರಣ್ ಇಂದು (ಆ.31) ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಗೌರವ ಸಲ್ಲಿಸಿದ್ದಾರೆ.
(ಏಜೆನ್ಸೀಸ್)
ಮೈಸೂರಿನಲ್ಲಿ ನಟ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮೈಸೂರು ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಶಾಲು ಹೊದಿಸಿ, ಹೂವಿನ ಹಾರ ಹಾಕುವ ಮೂಲಕ ಸಿಎಂಗೆ ರಾಮ್ಚರಣ್ ಗೌರವ ಸಲ್ಲಿಸಿದ್ದಾರೆ. ಇನ್ನೂ ಈ ವೇಳೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಸಂತೋಷ್ ಲಾಡ್ ಕೂಡ ಉಪಸ್ಥಿತರಿದ್ದರು.