ನಟ ಪುನೀತ್ ರಾಜ್‌ಕುಮಾರ್ ಸಾಧನೆ, ಸೇವೆ ಅನನ್ಯ

chn dec 30 nalluru.
Published on

ಚನ್ನಗಿರಿ: ನಟ ದಿ. ಪುನೀತ್ ರಾಜ್‌ಕುಮಾರ್ ಅವರ ಸಾಧನೆ, ಸೇವೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.

ತಾಲೂಕಿನ ನಲ್ಲೂರು ಗ್ರಾಮದಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಎದುರು ಸ್ಥಾಪಿಸಿರುವ ಡಾ.ಪುನೀತ್ ರಾಜ್‌ಕುಮಾರ್ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಶನಿವಾರ ಮಾತನಾಡಿದರು.

ಕನ್ನಡ ನಾಡು, ನುಡಿ ಮತ್ತು ಸಿನಿಮಾ ಇರುವವರೆಗೆ ಪುನೀತ್ ರಾಜ್‌ಕುಮಾರ್ ಅವರನ್ನು ಜನರು ಮನಸ್ಸಿನಲ್ಲಿ ಇಟ್ಟುಕೊಂಡು ಪೂಜಿಸುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ಥಳಿ ದಾನಿಗಳಾದ ಪ್ರಥಮ ದರ್ಜೆ ಗುತ್ತಿಗೆದಾರ ಆರ್. ಪರಮೇಶ್ ಮಾತನಾಡಿ, ಪುನೀತ್ ಅಭಿಮಾನಿಗಳು ರಾಜ್ಯ ಮತ್ತು ಹೊರರಾಜ್ಯದಲ್ಲಿ ಇದ್ದಾರೆ. ಅವರು ಮಾಡಿದ ಕೆಲಸದ ಪ್ರೇರಣೆ ನಮಗೆ ದಾರಿದೀಪವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜ್ಯೂನಿಯರ್ ಪುನೀತ್ ರಾಜ್‌ಕುಮಾರ್ ಚಂದ್ರಮೌಳಿ ಮೈಸೂರು ಮನರಂಜನೆ ನೀಡಿದರು. ಅನ್ನ ಸಂತರ್ಪಣೆ ನಡೆಸಲಾಯಿತು ಹಾಗೂ ಡಾ.ಪುನೀತ್ ರಾಜ್‌ಕುಮಾರ್ ಸ್ತಬ್ಧಚಿತ್ರದ ಮೆರವಣಿಗೆ ನಡೆಸಲಾಯಿತು.

ನಲ್ಲೂರು ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಹಾಲೇಶ್, ಉಪಾಧ್ಯಕ್ಷೆ ಚಂದ್ರಮತಿ ರಂಗನಾಥ್, ಆರೈಕೆ ಆಸ್ಪತ್ರೆ ವ್ಯವಸ್ಥಾಪಕ ಡಾ. ರವಿಕುಮಾರ್, ತುಮ್‌ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ತರಳಬಾಳು ವಿದ್ಯಾಸಂಸ್ಥೆ ಅಧ್ಯಕ್ಷ ರುದ್ರೇಗೌಡ್ರು, ಮಂಜುನಾಥ್ ಗೌಡ್ರು, ಸುರೇಶ್, ಆರ್. ವಿನಯ್‌ಕುಮಾರ್, ಭಜರಂಗದಳ ಅಧ್ಯಕ್ಷ ಜಿ.ಬಿ. ಮಧು, ಗ್ರಾಪಂ ಸದಸ್ಯ ಮಂಜಪ್ಪ, ಸಿ. ರವಿ, ಎಚ್. ದಿನೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net