ಮುನಿರತ್ನ ಪರ ಪ್ರಚಾರಕ್ಕೆ ತೆರಳೋ ಮುನ್ನ ನಟ ದರ್ಶನ್​, ನಿಖಿಲ್ ಹೆಸರು ಪ್ರಸ್ತಾಪಿಸಿದ್ದೇಕೆ?​

Darshan and nikhil
Published on

ಬೆಂಗಳೂರು: ರಾಜರಾಜೇಶ್ವರಿ ನಗರದ ಉಪಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿರುವ ಬೆನ್ನಲ್ಲೇ ಮೂರು ಪಕ್ಷದ ನಾಯಕರ ಪ್ರಚಾರ ಭರಾಟೆ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್​ ಇಂದು ಪ್ರಚಾರ ಕಣಕ್ಕೆ ಧುಮುಕಿರುವುದು ಬಿಜೆಪಿ ಪಾಳಯಕ್ಕೆ ಮತ್ತಷ್ಟು ಬಲ ತಂದಿದೆ.

ಚುನಾವಣಾ ಪ್ರಚಾರಕ್ಕೆ ಹೊರಡುವ ಮುನ್ನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್​, ನನ್ನ ಚಿತ್ರಗಳ ನಿರ್ಮಾಪಕ ಎಂಬ ಕಾರಣಕ್ಕೆ ಪ್ರಚಾರಕ್ಕೆ ತೆರಳುತ್ತಿಲ್ಲ. ಬದಲಾಗಿ ಅವರ ಮಾನವೀಯತೆಯನ್ನು ನೋಡಿ ಹೋಗುತ್ತಿದ್ದೇನೆ ಎಂದು ಹೇಳಿದರು.

ಇಡೀ ಜಗತ್ತನೇ ಕರೊನಾ ಬಾಧಿಸಿದೆ. ಇಂತಹ ಸಂದರ್ಭದಲ್ಲಿ ಅನೇಕರು ಊಟವಿಲ್ಲದೇ ಪರದಾಡಿದ್ದಾರೆ. ಆದರೆ, ಮುನಿರತ್ನ ಅವರು ಅನೇಕರ ಜನರಿಗೆ ದಾಸೋಹವನ್ನೇ ನಡೆಸಿದರು. ಅವರ ಕಾರ್ಯಗಳಾಗಲಿ ಅಥವಾ ನಿರ್ಮಾಪಕನೆಂಬ ಕಾರಣದಿಂದಾಗಲಿ ನಾನು ಪ್ರಚಾರಕ್ಕೆ ಹೋಗುತ್ತಿಲ್ಲ. ಮಾನವೀಯ ಕೆಲಸಗಳನ್ನು ಗುರುತಿಸಿ ಅವರ ಪರ ಪ್ರಚಾರ ಮಾಡುತ್ತಿದ್ದೇನೆಂದು ಪುನರುಚ್ಛರಿಸಿದರು.

ಇದೇ ವೇಳೆ ನಿಖಲ್​ ಹೆಸರು ಪ್ರಸ್ತಾಪಿಸಿದ ದರ್ಶನ್​​, ಆರ್​ಆರ್ ನಗರ ಕ್ಷೇತ್ರದಲ್ಲಿ ನಿಖಿಲ್, ಅವರ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ನಾನು ಮುನಿರತ್ನ ಪರವಾಗಿ ಪ್ರಚಾರಕ್ಕೆ ಹೊಗುತ್ತಿದ್ದೇನೆ ಎಂದಷ್ಟೇ ಹೇಳಿದರು.

ಒಂದು ಬೆಳಗ್ಗೆಯಿಂದ ರಾತ್ರಿಯವರೆಗೂ ನಟ ದರ್ಶನ್​ ಅವರು ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅನೇಕ ಏರಿಯಾಗಳಲ್ಲಿ ರೋಡ್​ ಶೋ ನಡೆಸಲಿದ್ದು, ಎಲ್ಲೆಡೆ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net