

ಬೆಳ್ತಂಗಡಿ: ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳು ರೋವರ್ಸ್ ಮತ್ತು ರೇಂಜರ್ಸ್ ಕಾರ್ಯ ಚಟುವಟಿಕೆಗಳಲ್ಲಿ ಯಾಂತ್ರಿಕವಾಗಿ ತೊಡಗಿಸಿಕೊಳ್ಳದೆ ಸಕ್ರಿಯವಾಗಿ ತೊಡಗಿಸಿಕೊಂಡಾಗ ಆ ದಳ ಉತ್ತಮವಾಗಿರುತ್ತದೆ ಮತ್ತು ಅಂಥ ದಳ ಎಲ್ಲರಿಂದಲೂ ವಿಶೇಷವಾಗಿ ಗುರುತಿಸಲ್ಪಡುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಈ ಬ್ಯಾಚ್‌ನ ವಿದ್ಯಾರ್ಥಿಗಳು ಎಂದು ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ.ಹೇಳಿದರು. ಉಜಿರೆಯ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ದಳದಿಂದ ಧನ್ಯೋಸ್ಮಿ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ಎರಡು ವಷರ್ಗಳಲ್ಲಿ ವಿವಿಧ ಸೇವಾ ಶಿಬಿರ ಮತ್ತು ವಿವಿಧ ಚಟುವಟಿಕೆಗಳಲ್ಲಿ ಕಾಲೇಜನ್ನು ಪ್ರತಿನಿಧಿಸಿದ ಎಲ್ಲ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಲೇಜಿನ ರೋವರ್ ಮತ್ತು ರೇಂಜರ್ಸ್ ಅಧಿಕಾರಿಗಳಾದ ಲಕ್ಷ್ಮೀಶ್ ಭಟ್ ಮತ್ತು ಅಂಕಿತಾ ಎಂ.ಕೆ.ಉಪಸ್ಥಿತರಿದ್ದರು. ಮೇಘನಾ ಸ್ವಾಗತಿಸಿ, ರೇಂಜರ್ ಮಧ್ವಿತಾ ವಂದಿಸಿ, ಪವನ್ ಬಿ.ಪಿ.ನಿರೂಪಿಸಿದರು. ಎರಡು ವಷರ್ಗಳಿಂದ ರೋವರ್ಸ್ ಮತ್ತು ರೇಂಜರ್ಸ್ ದಳದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪದವಿ ಪೂರ್ವ ವ್ಯಾಸಂಗ ಮುಗಿಸಿ ವಾರ್ಷಿಕ ಪರೀಕ್ಷೆಗೆ ಕಾಯುತ್ತಿರುವ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಎರಡು ವರ್ಷದ ಈ ಅವಧಿಯಲ್ಲಿನ ರೋವರ್ಸ್ -ರೇಂಜರ್ಸ್ ಸೇವಾ ಕಾರ್ಯಚಟುವಟಿಕೆಗಳಿಗೆ ದಳ ಮತ್ತು ಕಾಲೇಜಿನ ಪರವಾಗಿ ಧನ್ಯವಾದ ಅರ್ಪಿಸುವ ಕಾರ್ಯಕ್ರಮವಾಗಿದೆ.
ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳುವವನು ಬುದ್ಧಿವಂತ. ನೀವು ಅವಕಾಶ ಬಹಳ ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದೀರಿ, ಎರಡು ವರ್ಷದ ಈ ಸೇವಾ ಕಾರ್ಯಚಟುವಟಿಕೆ ಬಹಳಷ್ಟು ಉತ್ತಮವಾಗಿದ್ದು ಇತರರಿಗೆ ಮಾದರಿಯಾಗುವಂತೆ ಇತ್ತು. ಮುಂದೆಯೂ ಉತ್ತಮ ಅವಕಾಶ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಳ್ಳಿ. ಡಾ.ರಾಜೇಶ್ ಬಿ., ಉಪಪ್ರಾಚಾರ್ಯ