

ಬೆಂಗಳೂರು: ಹಳ್ಳಿಕಾರ ಸಮುದಾಯವನ್ನು "ಪ್ರವರ್ಗ-3ಎ'ನಿಂದ "ಪ್ರವರ್ಗ-1ಕ್ಕೆ ಸೇರಿಸಲು ಶ್ರೀಘದಲ್ಲೇ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಹಳ್ಳಿಕಾರರ ಸಂ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ನಲ್ಲಿ ಭಾನುವಾರ ಆಯೋಜಿಸಲಾಗಿದ್ದ " ಹಳ್ಳಿಕಾರ ಸಮುದಾಯ ಸಮಾವೇಶ'ದಲ್ಲಿ ಸಿಎಂ ಮಾತನಾಡಿದರು.
ಸಮುದಾಯದ ಬಗ್ಗೆ ಸಹಾನುಭೂತಿ ಇದೆ. "ಪ್ರವರ್ಗ-1'ಕ್ಕೆ ಸಮುದಾಯವನ್ನು ಸೇರಿಸಬೇಕೆಂಬ ಬೇಡಿಕೆ ಕುರಿತು ವರದಿ ಪರಿಶೀಲಿಸಿದ ಬಳಿಕ ನಿರ್ಧರಿಸುತ್ತೇನೆ. ಸಮಾಜದಲ್ಲಿ ಜಾತಿಯ ಆರ್ಥಿಕ, ಸಾಮಾಜಿಕ ಸ್ಥಿತಿ&ಗತಿ ತಿಳಿಯಲು ಜಾತಿ ಸಮೀಕ್ಷಾ ವರದಿ ಮುಖ್ಯ. 2011ರಲ್ಲಿ ಜನಗಣತಿ ಸಮೀಕ್ಷಾ ನಡೆಸಲಾಗಿತ್ತು. ನಮ್ಮ ಸರ್ಕಾರ ಈ ವರದಿಯನ್ನು ಸ್ವೀಕರಿಸಿದೆ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡಿದೆ. ಈ ವ್ಯಾಪ್ತಿಗೆ ಹಳ್ಳಿಕಾರ ಸಮುದಾಯ ಬರುತ್ತದೆಯೇ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕಿದೆ. ಶಾಶ್ವತ ಹಿಂದುಳಿದ ಆಯೋಗಕ್ಕೆ ನಿಮ್ಮ ಬೇಡಿಕೆ ಕಳುಹಿಸಿ ಅಧ್ಯಯನ ಮಾಡಿಸಿ ವರದಿ ಪಡೆಯಲಾಗುವುದು. ಬಳಿಕ ಸಮುದಾಯಕ್ಕೆ ನ್ಯಾಯಯುತವಾಗಿ ಏನು ಸಲ್ಲಬೇಕು ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಹೇಳಿದರು.
ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಿಎಂ ಸಿದ್ದರಾಮಯ್ಯಗೆ ಸಮುದಾಯದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವರಾದ ರಾಮಲಿಂಗಾರೆಡ್ಡಿ, ಡಿ. ಸುಧಾಕರ್, ಶಾಸಕರಾದ ಎಸ್.ಟಿ. ಕೃಷ್ಣಪ್ಪ, ಪ್ರಿಯಕೃಷ್ಣ, ಟಿ.ಬಿ. ಜಯಚಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯ ಎಚ್.ಎಂ.ರೇವಣ್ಣ, ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಸಂದ ಉಪಾಧ್ಯಕ್ಷ ಕೆ.ಎಂ.ನಾಗರಾಜ್, ಸಮುದಾಯದ ಪದಾಧಿಕಾರಿಗಳು ಸೇರಿ ಸಾವಿರಾರು ಜನರು ಉಪಸ್ಥಿತರಿದ್ದರು.
ಹಳ್ಳಿಕಾರರು ಭೂಮಿಯ ಮಕ್ಕಳು
ನಾನು ಮತ್ತು ಸಿಎಂ ಸಿದ್ದರಾಮಯ್ಯ ಹಳ್ಳಿಕಾರ ಸಮಾಜದವರು. ನಿಮ್ಮ ಜತೆ ಸರ್ಕಾರ ಇದೆ. ಎಲ್ಲ ಬೇಡಿಕೆಗಳನ್ನು ಚರ್ಚಿಸಿ ಈಡೇರಿಸಲಾಗುವುದು. ಹಳ್ಳಿಕಾರರು ಭೂಮಿಯ ಮಕ್ಕಳು. ಕೃಷ್ಣನ ಕುಲಬಂಧುಗಳು. ಎಲ್ಲ ಸಮುದಾಯಗಳ ಜತೆಗೆ ಸಹಬಾಳ್ವೆ ನಡೆಸುತ್ತಾ ಜೀವನ ನಡೆಸುತ್ತಿರುವವರು. ಈ ಸಮುದಾಯಕ್ಕೆ 1,200 ವರ್ಷಗಳ ಇತಿಹಾಸವಿದೆ. ರಾಸುಗಳನ್ನು ರಸುತ್ತಿರುವ ಸಮಾಜದ ಯಶಸ್ಸು, ಏಳಿಗೆಗೆ ನಾವು ಕೈ ಜೋಡಿಸುತ್ತೇವೆ. "ಯಶಸ್ಸನ್ನು ಕಾಣಲು ಧರ್ಮರಾಯನ ಧರ್ಮತ್ವ, ಕರ್ಣನ ದಾನ, ಭೀಮನ ಬಲ, ವಿದುರನ ನೀತಿ, ಅರ್ಜುನ ಗುರಿ ಕೊನೆಯದಾಗಿ ಕೃಷ್ಣನ ತಂತ್ರ ಇರಬೇಕು' ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಸಮುದಾಯದ ಧೀಮಂತ ನಾಯಕ ಕೆ.ಎಂ.ನಾಗರಾಜು. ಬೆಂಗಳೂರಿನಲ್ಲಿ ಅನೇಕ ಸಮುದಾಯಗಳ ನೂರಾರು ನಾಯಕರನ್ನು ಸೃಷ್ಟಿ ಮಾಡಿದವರು. ಹಲವು ವರ್ಷಗಳಿಂದ ಅವರ ನಾಯಕತ್ವದಲ್ಲಿ ಅನೇಕರು ಪ್ರಗತಿ ಹೊಂದಿದ್ದಾರೆ. ಮಾಜಿ ಸಿಎಂ ವೀರಪ್ಪ ಮೊಯ್ಲಿ, ನಾಗರಾಜುನನ್ನು ಎಂಎಲ್ಸಿ ಸ್ಥಾನಕ್ಕೆ ಸೂಚಿಸಿದ್ದರು. ಆದರೆ, ಈ ಸ್ಥಾನ ನನಗೆ ಬೇಡವೆಂದು ದಯಾನಂದ ಸಾಗರ್ ಪುತ್ರ ಪ್ರೇಮಚಂದ್ರ ಸಾಗರ್ಗೆ ತ್ಯಾಗ ಮಾಡಿದರು. ಸಿಕ್ಕ ಅಧಿಕಾರ ಬಿಟ್ಟು ಕೊಟ್ಟಂತಹ ಹೃದಯ ಶ್ರೀಮಂತಿಕೆ ವ್ಯಕ್ತಿ ಎಂದು ಡಿಸಿಎಂ ಬಣ್ಣಿಸಿದರು.
80 ವರ್ಷಗಳ ಬಳಿಕ ಕೆ.ಎಂ.ನಾಗರಾಜು ಮುಖಂಡತ್ವದಲ್ಲಿ ಸಮಾವೇಶ ನಡೆಯುತ್ತಿದೆ. "ಭೂಮಿಯ ಮಕ್ಕಳಾದ ನಿಮ್ಮ ಬದುಕೇ ನಮ್ಮ ಬದುಕು, ನಿಮ್ಮ ಶ್ರೇಯಸ್ಸೇ ನಮ್ಮ ಶ್ರೇಯಸ್ಸು. ನಿಮ್ಮ ಶ್ರಮದಿಂದ ನಮ್ಮ ಸಮಾಜಕ್ಕೆ ಫಲ'. 80 ವರ್ಷಗಳ ನಂತರ ಜೊತೆಗೂಡಲು ಪ್ರಾರಂಭ ಮಾಡಿದ್ದೀರಿ. ಜೊತೆಗೂಡುವುದು ಆರಂಭ, ಇದರಿಂದ ಪ್ರಗತಿ, ಯಶಸ್ಸು ಸಾಧ್ಯ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಂಟನೆಗೆ ಹಾಗೂ ಸಮಾಜಕ್ಕೆ ಹೊಸ ರೂಪ ಸಿಗುವಂತಾಗಲಿ.
| ಡಿ.ಕೆ.ಶಿವಕುಮಾರ್. ಡಿಸಿಎಂ.