ಹೇರಿಕುದ್ರು ತಿರುವಿನಲ್ಲಿ ಅಪಘಾತ ತಡೆಗೆ ಕ್ರಮ

gan (9)
Published on

ಕುಂದಾಪುರ: ಹೇರಿಕುದ್ರುವಿನ ಹೆದ್ದಾರಿ ಅಂಡರ್‌ಪಾಸ್‌ನ ಅಪಾಯಕಾರಿ ತಿರುವಿನಲ್ಲಿ ಅಪಘಾತಗಳು ಸಂಭವಿಸುತ್ತಿದ್ದರಿಂದ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಸಂಸ್ಥೆ ಅಪಘಾತ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ರಾ.ಹೆ. 66ರ ಹೇರಿಕುದ್ರು ಅಂಡರ್‌ಪಾಸ್ ಕೊನೆಯಾಗುವಲ್ಲಿ ಸಂಗಮ್ ಸೇತುವೆಗಿಂತ ಸ್ವಲ್ಪ ಹಿಂದೆ ಅವೈಜ್ಞಾನಿಕ ಕಾಮಗಾರಿಯಿಂದ ಅನೇಕ ಅವಘಡಗಳು ಸಂಭವಿಸುತ್ತಿತ್ತು. ಇದರಿಂದ ಎಚ್ಚೆತ್ತುಕೊಂಡ ಐಆರ್‌ಬಿ ಸಂಸ್ಥೆ ತಡೆಗೋಡೆಗೆ ಕಪ್ಪು ಬಿಳಿ ಬಣ್ಣ ಬಳಿದು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಜತೆಗೆ ಎರಡು ಕಡೆ ಹೆದ್ದಾರಿಯುದ್ದಕ್ಕೂ ರಾತ್ರಿ ವೇಳೆ ವಾಹನಗಳಿಗೆ ಅನುಕೂಲವಾಗುವಂತೆ ರಿಫ್ಲೆಕ್ಟರ್‌ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ತಿರುವಿನಲ್ಲಿ ತಡೆಗೋಡೆಯಂತೆ ಕಂಬಗಳನ್ನು ಸಹ ಹಾಕಲಾಗಿದೆ.

ಅಪಾಯಕಾರಿ ತಿರುವನ್ನು ನೇರವಾಗಿ ವಾಡಿದರೆ ಈ ರೀತಿಯ ಅವಡಗಳನ್ನು ನಿಯಂತ್ರಿಸಬಹುದು. ಈ ಬಗ್ಗೆ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ತಿರುವನ್ನು ಸರಿಪಡಿಸಿ, ನೇರವಾಗಿ ವಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸರ್ವೀಸ್ ರಸ್ತೆಯೂ ತಿರುವು ಮುರುವಿನಂತಿದ್ದು ಇದನ್ನು ಸಹ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

ಹೇರಿಕುದ್ರು ಅಂಡರ್‌ಪಾಸ್ ಬಳಿಯ ಅವೈಜ್ಞಾನಿಕ ಹಾಗೂ ಅಪಾಯಕಾರಿ ತಿರುವಿನ ಬಗ್ಗೆ ವಾಹಿತಿ ಪಡೆದು, ಸಂಬಂಧಪಟ್ಟ ಇಂಜಿನಿಯರ್ ಹಾಗೂ ಐಆರ್‌ಬಿಯವರಿಗೆ ಸೂಚನೆ ನೀಡಿ, ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗುವುದು. ತಿರುವು ಸರಿಪಡಿಸುವ ಬಗ್ಗೆಯೂ ವರದಿ ಕೊಡುವಂತೆ ಸೂಚಿಸಲಾಗುವುದು. ಕೆ.ಶಿವಕುವಾರ್, ಯೋಜನಾ ನಿರ್ದೇಶಕ, ಹೆದ್ದಾರಿ ಪ್ರಾಧಿಕಾರ ಹೊನ್ನಾವರ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net