ವಿದ್ಯುತ್ ಅಭಿವೃದ್ಧಿಗೆ ಕ್ರಮ

15 yelandur 04
Published on

ಯಳಂದೂರು: ಗೂಳೀಪುರ ಗ್ರಾಮಕ್ಕೆ 50ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಗೂಳೀಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮದಲ್ಲಿನ ವಿದ್ಯುತ್ ಸಮಸ್ಯೆ ಸಂಬಂಧ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೆಸ್ಕ್‌ವತಿಯಿಂದ ಅಭಿವೃದ್ಧಿ ಪಡಿಸಲು ಶ್ರಮಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ, ಕುಡಿಯುವ ನೀರು, ಚರಂಡಿ ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುತ್ತದೆ. ನಾಲೆಗಳ ದುರಸ್ತಿಗೆ ಹಾಗೂ ಸೇತುವೆ ನಿಮಾರ್ಣಕ್ಕೆ ಯೋಜನೆ ಕೈಗೊಳ್ಳಲಾಗುವುದು. ಕೆಎಸ್‌ಆರ್‌ಟಿಸಿ ಬಸ್ ಕಲ್ಪಿಸುವಂತೆ ಗ್ರಾಮಸ್ಥರು ಮನವಿಮಾಡಿದ್ದು, ಕ್ರಮ ವಹಿಸಲಾಗುವುದು ಎಂದರು.

ಅಧಿಕಾರಿಗಳು ಜನಸಾಮಾನ್ಯರ ಕೆಲಸಗಳನ್ನು ವಿಳಂಬಮಾಡದೆ ಮುಗಿಸಬೇಕು ಎಂದು ನಿರ್ದೇಶನ ನೀಡಿದರು. ತಾಪಂ ಇಒ ಪೂರ್ಣಿಮಾ, ಉಪತಹಸೀಲ್ದಾರ್ ನಾಗಲಾಂಬಿಕಾ, ಶಂಕರ್, ಗ್ರಾಪಂ ಉಪಾಧ್ಯಕ್ಷೆ ಮಹೇಶ್ವರಿ, ಬೂಗಿರೀಶ್, ರವಿಶಂಕರಮೂರ್ತಿ, ಶಂಕರ್, ಚಿನ್ನಸ್ವಾಮಿ, ನಾಗಣ್ಣ, ನಾಗೇಂದ್ರಸ್ವಾಮಿ, ಶಿವಕುಮಾರ್, ಹೊಂಗನೂರು ಚೇತನ್, ಪಿಡಿಒ ಸೋಮಶೇಖರ್, ನಾಗರಾಜು, ರಾಜೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net