ಕ್ರಿಯಾಶೀಲವಾಗಿದ್ದರೆ ಸಂಘಗಳ ಮೌಲ್ಯ ಹೆಚ್ಚಳ

JUL 21-HRP-01
ಹರಪನಹಳ್ಳಿಯಲ್ಲಿ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಿರಿಯ ಕಲಾವಿದ ಷಣ್ಮುಖಪ್ಪ ಭಾಗವತರ ಉದ್ಘಾಟಿಸಿದರು. ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ, ಜಾನಪದ ಜಾಣರ ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯಾಧ್ಯಕ್ಷ ಮೂರ್ತಿ ಎಲ್, ಪ್ರಧಾನ ಕಾರ್ಯದರ್ಶಿ ಜಯಂತಿ ಹುದಾರ್, ಖಜಾಂಚಿ ರಮೇಶ್ ಎಂ. ಇದ್ದರು.
Published on

ಹರಪನಹಳ್ಳಿ: ಕಲೆಗೆ ಜಾತಿ ಭೇದಗಳಿಲ್ಲ. ನಾಡಿನ ಜಾನಪದ ಸಂಸ್ಕೃತಿ ದೇಶಕ್ಕೆ ಮಾದರಿಯಾಗಿದೆ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಹೇಳಿದರು.

ಮೇಗಳಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾನಪದ ಜಾಣರ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಗುರು ಚೇತನ ಕಲಾ ಬಳಗ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಸಿರಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.

ಹರಪನಹಳ್ಳಿ ಅತಿ ಹೆಚ್ಚು ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, ವಿಜಯನಗರ ಜಿಲ್ಲೆ ಮಾಡುವುದಕ್ಕೂ ಮುನ್ನ ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಮಾಡುವಂತೆ ವಿವಿಧ ಸಂಘಟನೆಗಳಿಂದ ಸಾಕಷ್ಟು ಹೋರಾಟ ಮಾಡಲಾಯಿತು. ಆದರೆ, ರಾಜಕಾರಣಿಗಳ ಕುತಂತ್ರದಿಂದ ಕೈತಪ್ಪಿತು. ಸಂಘಗಳನ್ನು ಮಾಡಿಕೊಂಡರೆ ಸಾಲದು.

ವಿವಿಧ ರೀತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಕ್ರಿಯಾಶೀಲವಾಗಿರಬೇಕು. ಆಗ ಸಂಘಗಳ ಮೌಲ್ಯ ಹೆಚ್ಚುತ್ತದೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಚನ್ನಬಸವ ಶಿವಯೋಗಿ ಸ್ವಾಮೀಜಿ ತಿಳಿಸಿದರು.

ಸಾಹಿತಿ ಇಸ್ಮಾಯಿಲ್ ಎಲಿಗಾರ್ ಮಾತನಾಡಿ, ಜಾನಪದ ಕಲೆ, ಸಾಹಿತ್ಯ ಜೀವಂತವಾಗಿರಲು ಶಿಕ್ಷಕರ ಕೊಡುಗೆ ಅಪಾರವಾಗಿದೆ. ಸರ್ಕಾರಿ ನೌಕರಿ ಸಲ್ಲಿಸುತ್ತಿದ್ದರೂ ಮಹಿಳೆಯರು ಅಭಿವ್ಯಕ್ತಿ ಸ್ವಾತಂತ್ರೃ ಹೊಂದಿಲ್ಲ. ಹಳ್ಳಿಗಳ ಅಭಿವೃದ್ಧಿಯಿಂದ ಕನ್ನಡದ ಉಳಿವು ಸಾಧ್ಯ. ಹಾಗಾಗಿ ಸರ್ಕಾರ ಹಳ್ಳಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು. ಭವಿಷ್ಯದ ಪೀಳಿಗೆಗೆ ಭಾಷೆಯನ್ನು ಉಳಿಸುವ ಅಗತ್ಯವಿದೆ ಎಂದರು.

ಮುಖ್ಯಶಿಕ್ಷಕ ಅರ್ಜುನ್ ಪರಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದಾಧಿಕಾರಿಗಳಾದ ಅಶೋಕ್ ಬಾಬು, ವನಶ್ರೀ ಶಿಂಧೆ, ಬಸಮ್ಮ ಕಂಠಿ, ರಾಮಾಂಜನೇಯ, ರಾಜು ರಾಮಾನಾಯ್ಕ, ಶೈಲಜಾ ಎಸ್., ಪರಪ್ಪ ಕರಿಗಾರ, ಎಂ.ಎ.ಬಾಗೇವಾಡಿ, ಪ್ರಮುಖರಾದ ಕೆ.ಷಣ್ಮುಖಪ್ಪ, ಖಾದರ್‌ಬಾಷಾ, ಬಿ.ಕೊಟ್ರಪ್ಪ, ಪದ್ಮರಾಜ್ ಜೈನ್, ಬಿ.ರಾಜಶೇಖರ, ಬಿ.ಚಂದ್ರಮೌಳಿ, ಹನುಮಂತಪ್ಪ, ಅಂಜಿನಪ್ಪ, ಕೆ.ಈಶ್ವರಪ್ಪ, ಎ.ಸಲಾಂ ಸಾಹೇಬ್, ಕೆ.ರಾಮಮೂರ್ತಿ, ಬಿ.ಈಶಾಚಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net