ಸಹಕಾರ ಸಂಘಗಳ ಸಹಾಯಕ ನಿಬಂಧಕರ ವಿರುದ್ಧ ಕ್ರಮಕ್ಕೆ ಪಟ್ಟು

Rmgm-Ph-001-AR Office Protest News Photo Rmgm 24-4-2025
Published on

* ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನೆ

ರಾಮನಗರ

ಅಧಿಕಾರ ದುರುಪಯೋಗಪಡಿಸಿಕೊಂಡು ಹಾಲು ಉತ್ಪಾದಕರು ಮತ್ತು ಸಂಘಗಳಿಗೆ ಸಹಕಾರ ಸಂಘಗಳ ಸಹಾಯಕನಿಬಂಧಕ ವೆಂಕಟೇಶ್ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಅವರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈತಸಂಘಟನೆ ಮುಖಂಡರು, ಅಮ್ಮಳ್ಳಿದೊಡ್ಡಿ ಹಾಲು ಉತ್ಪಾದಕ ರೈತರು, ಮಹಿಳೆಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಚೇರಿಗೆ ಬೀಗ ಜಡಿದು ಗುರುವಾರ ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣ ತಾಲೂಕಿನ ಅಮ್ಮಳ್ಳಿದೊಡ್ಡಿ, ಕೃಷ್ಣಾಪುರ, ಚಿಕ್ಕವಿಠಲೇನಹಳ್ಳಿ, ಸೋಗಾಲಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಸಹಾಯಕ ನಿಬಂಧಕ ವೆಂಕಟೇಶ್ ಕಚೇರಿಗೆ ಬಾರದೆ ಸಂಘಗಳ ಕಾರ್ಯಚಟುವಟಿಕೆಗೆ ಸ್ಪಂದಿಸದೆ ರೈತರಿಗೆ ಬಟಾವಾಡೆ ಮಾಡಲು ಸಹಿ ಹಾಕದೆ ರಾಜಕೀಯ ಒತ್ತಡದಿಂದ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಇದರಿಂದ ರೈತರಿಗೆ ಆಡಳಿತ ಮಂಡಳಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಪ್ರತಿಭಟನಾನಿರತರರು ದೂರಿದರು.

ಸ್ಥಳಕ್ಕೆ ಆಗಮಿಸಿದ ಐಜೂರು ಸಬ್ ಇನ್‌ಸ್ಪೆಕ್ಟರ್ ಜಾರ್ಜ್‌ಪ್ರಕಾಶ್ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರೂ ಪ್ರತಿಭಟನಾಕಾರರು ಪಟ್ಟು ಬಿಡದೆ ಬೇಡಿಕೆ ಈಡೇರುವವರೆಗೂ ಬೀಗ ತೆಗೆಯುವುದಿಲ್ಲ. ಅಧಿಕಾರಿ ಬರಬೇಕು ಎಂದರು. ಆಗ ಪೊಲೀಸರು ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ತಿಳಿಸಿದರು. ಹಿರಿಯ ಅಧಿಕಾರಿಗಳು ಪ್ರತಿಭಟನಾ ನಿರತರ ಜತೆ ಮಾತನಾಡಿದ ನಂತರ ಬೀಗ ತೆಗೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net