ಸಮಸ್ಯೆಗಳು ಬಾರದಂತೆ ಕಾರ್ಯನಿರ್ವಹಿಸಿ

ಸಮಸ್ಯೆಗಳು ಬಾರದಂತೆ ಕಾರ್ಯನಿರ್ವಹಿಸಿ
Published on

ಬೆಟ್ಟದಪುರ: ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆ ಉದ್ಭವಿಸದಂತೆ ಅಧಿಕಾರಿಗಳು ಕ್ರಮವಹಿಸಿಬೇಕು ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಬೆಟ್ಟದಪುರ ಸಮೀಪದ ಗೊರಹಳ್ಳಿ ಗ್ರಾಮದಲ್ಲಿ ಬುಧವಾರ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡಾಗ ಸಾರ್ವಜನಿಕರು ನೀಡಿರುವ ಮನವಿಗಳನ್ನು ಸ್ವೀಕರಿಸಿದ್ದು, ಗ್ರಾಮಕ್ಕೆ ಬೇಕಾದ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗುವುದು ಎಂದರು.

ಬೆಟ್ಟದಪುರ, ಅಲ್ಪಾನಾಯಕನಹಳ್ಳಿ, ಕುಳ್ಳಯ್ಯನಕೊಪ್ಪಲು, ಹಳಿಯೂರು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆಭೂಮಿ ಪೂಜೆ ನೇರವೇರಿಸಿದರು. ಗ್ರಾಮಗಳಿಗೆ ಸಚಿವರು ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ಸಮುದಾಯ ಭವನ, ದೇವಾಲಯಗಳ ಅಭಿವೃದ್ಧಿಗೆ ಅನುದಾನ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ಕೆಪಿಸಿಸಿ ವಕ್ತ್ತಾರ ಲಕ್ಷ್ಮಣ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಗ್ರಾ.ಪಂ. ಮಾಜಿ ಅಧ್ಯಕ್ಷೆ ಲತಾ ವಸಂತ, ರಕ್ಷಿತ್, ಜಿ.ಆರ್. ವಸಂತ್, ಬಸವರಾಜು, ಮೂರ್ತಿ, ಶ್ರೀನಿವಾಸ, ಹನುಮಂತಶೆಟ್ಟಿ, ಮಹಾದೇವ, ರಾಜಯ್ಯ, ನಾಗರಾಜಾಚಾರಿ, ಪ್ರಶಾಂತ, ಚಂದ್ರಹಾಸ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net