ನಿಧಿ ಆಪ್ಕೆ ನಿಕತ್ ಎಂಬುದು ಇಪಿಎಫ್ ಮತ್ತು ಎಂಪಿ ಕಾಯ್ದೆ : ಜಾಗೃತಿ ಶಿಬಿರ

Published on

ಯಾದಗಿರಿ :  ನಿಧಿ ಆಪ್ಕೆ ನಿಕತ್ ಎಂಬುದು ಇಪಿಎಫ್ ಮತ್ತು ಎಂಪಿ ಕಾಯ್ದೆ, 1952 ರ ನಿಬಂಧನೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮಧ್ಯಸ್ಥಗಾರರು, ಸದಸ್ಯರು ಮತ್ತು ಉದ್ಯೋಗದಾತರು ಮತ್ತು ಇಪಿಎಫ್‌ಓ ನಡುವೆ ನಿಕಟ ಸಂವಹನಕ್ಕಾಗಿ ಜಿಲ್ಲಾ ಜಾಗೃತಿ ಶಿಬಿರ ಮತ್ತು ಗ್ರಾಹಕ ಔಟ್ರೀಚ್ ಕಾರ್ಯಕ್ರಮವಾಗಿದೆ ಎಂದು ರಾಯಚೂರು ಪ್ರಾದೇಶಿಕ ಕಛೇರಿ ಪ್ರಾದೇಶಿಕ ಪಿಎಫ್ ಆಯುಕ್ತರು ಶಶಿಕುಮಾರ ಅವರು ತಿಳಿಸಿದ್ದಾರೆ.

ಕುಂದುಕೊರತೆಗಳು, ಪ್ರಶ್ನೆಗಳ ಸ್ಥಳದಲ್ಲೇ ಪರಿಹಾರಗಳನ್ನು ಸಹ ಸುಗಮಗೊಳಿಸುತ್ತದೆ, ಇದು ಭವಿಷ್ಯನಿಧಿ, ಪಿಂಚಣಿ ಇತ್ಯಾದಿಗಳಿಗೆ ಸಂಬAಧಿಸಿದ ಕುಂದುಕೊರತೆಗಳು, ಪ್ರಶ್ನೆಗಳನ್ನು ಪರಿಹರಿಸುವ ನಿರಂತರ ಪ್ರಯತ್ನಗಳ ಒಂದು ಹೆಜ್ಜೆಯಾಗಿದೆ ಮತ್ತು ಪ್ರತಿ ತಿಂಗಳು ನಡೆಯುತ್ತದೆ. ಈಗ, ಜಂಟಿ ನಿಧಿ ಆಪ್ಕೆ ನಿಕತ್ 2.0 ಕಾರ್ಯಕ್ರಮವನ್ನು ಪ್ರತಿ ತಿಂಗಳು ಇಪಿಎಫ್‌ಒ ಮತ್ತು ಇಎಸ್‌ಐಸಿ ನಡೆಸಲು ನಿರ್ಧರಿಸಲಾಗಿದೆ.  ಎರಡೂ ಸಂಸ್ಥೆಗಳು ಪ್ರತಿ ತಿಂಗಳು ಪರ್ಯಾಯವಾಗಿ ಜಂಟಿ ಓಂಓ ಶಿಬಿರ ಏರ್ಪಡಿಸಲಾಗಿದೆ.

ಈ ನಿಟ್ಟಿನಲ್ಲಿ, ಇಪಿಎಫ್‌ಒ 2024 ರ ಡಿಸೆಂಬರ್ ತಿಂಗಳು ಜಂಟಿ ನಿಧಿ ಆಪ್ಕೆ ನಿಕತ್ಕ ಕಾರ್ಯಕ್ರಮವನ್ನು 2024ರ ಡಿಸೆಂಬರ್ 27 ರಂದು ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆಯ ವರೆಗೆ ರಾಯಚೂರು ಜಿಲ್ಲೆಯ ಎಲ್ಲಾ ಉದ್ಯೋಗದಾತರು, ನೌಕರರು ಮತ್ತು ಪಿಂಚಣಿದಾರರಿಗೆ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮುಂಡರಗಿ, ಹೈದರಾಬಾದ್ ರಸ್ತೆ, ಯಾದಗಿರಿ"ನಲ್ಲಿ ನಡೆಸಲು ನಿರ್ಧರಿಸಿದೆ. ಪಿಂಚಣಿದಾರರು, ಇಪಿಎಫ್ ಚಂದಾದಾರರು ಮತ್ತು ಉದ್ಯೋಗದಾತರು ಈ ಅವಕಾಶವನ್ನು ಪಡೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net