ನಾಯಕತ್ವ ಗುಣ, ಜ್ಞಾನ ಸಂಪಾದಿಸಿಕೊಳ್ಳಿ, ಎನ್​ಎಸ್​ಎಸ್ ಶಿಬಿರ ಉದ್ಘಾಟಿಸಿ ಶಾಸಕ ಬಣಕಾರ ಸಲಹೆ

02 HKR 04
Published on

ಹಿರೇಕೆರೂರ: ವಿದ್ಯಾರ್ಥಿಗಳು ಎನ್​ಎಸ್​ಎಸ್ ಶಿಬಿರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ನಾಯಕತ್ವ ಗುಣ, ಜ್ಞಾನವನ್ನು ಸಂಪಾದಿಸಿ ಉನ್ನತ ಗುರಿ ತಲುಪಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.


ತಾಲೂಕಿನ ಆಲದಗೇರಿ ಗ್ರಾಮದಲ್ಲಿ ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯ ಕೆ.ಎಚ್. ಪಾಟೀಲ್ ಪದವಿ ಪೂರ್ವ ಕಾಲೇಜ್ ವತಿಯಿಂದ ಏರ್ಪಡಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.


ಸಿಇಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರತ್ನವ್ವ ಕೊರವರ, ಉಪಾಧ್ಯಕ್ಷೆ ಸುನಂದಾ ಬಂಗೇರ, ಹೊಳೆಯಪ್ಪ ಮಾಸಣಗಿ, ಕುಬೇರಪ್ಪ ಕರೆಗೌಡ, ಮಂಜವ್ವ ಯಡಚಿ, ಪರಮೇಶಪ್ಪ ಡಮ್ಮಳ್ಳಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಾಂಶುಪಾಲೆ ಕೆ.ಎಚ್. ಮಾವಿನತೋಪ, ಎನ್.ಎಸ್.ಎಸ್ ಅಧಿಕಾರಿ ಜಾವಿದ್ ಭಾಷಾ, ದೈಹಿಕ ಉಪನ್ಯಾಸಕ ಆರ್.ಎಂ. ಕರೆಗೌಡ್ರ, ತನುಜಾ ಉಪ್ಪಾರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net