ಉತ್ತಮ ಹವ್ಯಾಸಗಳಿಂದ ಗುರಿ ಸಾಧನೆ

kota (2)
Published on

ಕೋಟ: ಹದಿಹರೆಯದ ಬದುಕಿನಲ್ಲಿ ಸಾಕಷ್ಟು ಎಳು ಬೀಳುಗಳು ಘಟಿಸುತ್ತವೆ. ಬಹಳ ಬೇಗ ಹೊರ ಜಗತ್ತಿನ ಆಕರ್ಷಣೆಗಳಿಗೆ ಒಳಗಾಗುತ್ತಾರೆ. ಆದುದರಿಂದ ಬದುಕಿನಲ್ಲಿ ಸಂಯಮ ಅಳವಡಿಸಿಕೊಂಡು ತಮ್ಮ ಗುರಿಯತ್ತ ಸಾಗಬೇಕು ಎಂದು ಕೋಟ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ಸಿ.ತಿಳಿಸಿದರು.

ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆಯಲ್ಲಿ ಮಾದಕ ದ್ರವ್ಯ ವ್ಯಸನ ತಡೆ ಹಾಗೂ ಸಂಚಾರಿ ನಿಯಮಗಳ ಪಾಲನೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ ಅಧ್ಯಕ್ಷತೆ ವಹಿಸಿ, ಸಂಚಾರಿ ನಿಯಮ ಇರುವುದು ಎಲ್ಲರ ಸುರಕ್ಷತೆಗಾಗಿ. ಎಲ್ಲರೂ ಸಂಚಾರಿ ನಿಯಮ ಪಾಲಿಸಿದಾಗ ದಿನನಿತ್ಯ ನಡೆಯುವ ನೂರಾರು ಅಪಘಾತ ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.

ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ.ಸುಬ್ರಹ್ಮಣ್ಯ ಎ., ಶ್ರಾವ್ಯಾ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ರಮೇಶ ಆಚಾರ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಉಪನ್ಯಾಸಕಿಯರಾದ ಸುಷ್ಮಾ ವಂದಿಸಿದರು, ಮಮತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net