

ಕುಂದಾಪುರ: ವಂಡ್ಸೆ ಹರವರಿಯ ಶ್ರೀನಿವಾಸ ನಿವಾಸದಲ್ಲಿ ಕಾಳಪ್ಪ ಗಾಣಿಗ ಅವರ ಸೇವೆಯಾಗಿ ಇತ್ತೀಚೆಗೆ ಹಾಲಾಡಿ ಮೇಳದ ಯಕ್ಷಗಾನ ಬಯಲಾಟದ ಸಂದರ್ಭ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ, ಕಲಾವಿದರಾದ ಚಂದ್ರಗೌಡ ಗೋಳಿಕೆರೆ, ವಿಶ್ವನಾಥ ಆಚಾರ್ಯ ತೊಂಬಟ್ಟು, ಶಂಕರ ನಾಯ್ಕ ಉಳ್ಳೂರು, ವಿಜಯ ಗಾಣಿಗ ಬೀಜಮಕ್ಕಿ, ನಾಗರಾಜ ದೇವಾಡಿಗ ಆಲೂರು, ಅಣ್ಣಪ್ಪ ಗಾಣಿಗ ಬೀಜಮಕ್ಕಿ, ಪ್ರಗತಿಪರ ಕೃಷಿಕ ಗುಂಡು ಪೂಜಾರಿ ಹರವರಿ, ಸಮಾಜಸೇವಕ ರವೀಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ವಿಜಯ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಹರವರಿ ವಾಟೆಮನೆ ಪ್ರಭಾಕರ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ತಾಪಂ ಮಾಜಿ ಸದಸ್ಯ ಉದಯ ಜಿ.ಪೂಜಾರಿ, ಸಂಜೀವ ಮಡಿವಾಳ ಗುಂಡ್ಮಿ, ಕಾಳಪ್ಪ ಗಾಣಿಗ ಕುಟುಂಬಿಕರು ಉಪಸ್ಥಿತರಿದ್ದರು.
ಶಿಕ್ಷಕರಾದ ರವಿರಾಜ ಶೆಟ್ಟಿ ಚಿತ್ತೂರು ಹಾಗೂ ಉದಯಕುಮಾರ ಶೆಟ್ಟಿ ಚಿತ್ತೂರು ಸನ್ಮಾನ ಪತ್ರ ವಾಚಿಸಿದರು. ರಾಘವೇಂದ್ರ ಗಾಣಿಗ ಹರವರಿ ಕಾರ್ಯಕ್ರಮ ನಿರ್ವಹಿಸಿದರು.