

ಕಲಘಟಗಿ: ಜೀವನದಲ್ಲಿ ಶಿಸ್ತು ಹಾಗೂ ಬದ್ಧತೆ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಿದಾಗ ಸಾಧನೆಯ ಮೇರು ಪರ್ವತ ಏರಲು ಸಾಧ್ಯ ಎಂದು ಪೊ›ಗ್ರೆಸ್ಸೀವ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೆ.ಬಿ. ಪಾಟೀಲಕುಲಕರ್ಣಿ ಹೇಳಿದರು.
ಪಟ್ಟಣದ ಪೊ›ಗ್ರೆಸ್ಸೀವ್ ಎಜುಕೇಶನ್ ಸೊಸೈಟಿಯ ಗರ್ಲ್ಸ್ ಇಂಗ್ಲಿಷ್ ಸ್ಕೂಲ್ನಲ್ಲಿ ಶನಿವಾರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೊಸೈಟಿ ಚೇರ್ಮನ್ ನಂದೀಶ ಪಾಟೀಲ ಮಾತನಾಡಿ, ತಂದೆ- ತಾಯಿ, ಗುರು- ಹಿರಿಯರೊಂದಿಗೆ ಉತ್ತಮ ಒಡನಾಟದೊಂದಿಗೆ ಪೂಜ್ಯ ಭಾವನೆ ಹೊಂದಿರಬೇಕು. ಇಂದಿನ ಜಗತ್ತು ಕೌಶಲವನ್ನು ಆಧರಿಸಿದೆ. ಸ್ವತಂತ್ರವಾಗಿ ಯಾರ ದಾಕ್ಷಿಣ್ಯಕ್ಕೂ ಒಳಗಾಗದೇ ಬದುಕಲು ವಿದ್ಯೆಯ ನೈಪುಣ್ಯತೆ ಹೊಂದಿರಬೇಕು ಎಂದರು.
ಆಡಳಿತ ಮಂಡಳಿ ಸದಸ್ಯ ಎಂ.ಎ. ವರದಾನಿ, ಬಸನಗೌಡ ಪಾಟೀಲ, ಶ್ರೀಧರ ಪಾಟೀಲಕುಲಕರ್ಣಿ ಉಪಸ್ಥಿತರಿದ್ದರು.
ಶಾಲೆಗೆ ರ್ಯಾಂಕ್ ಹಾಗೂ ವಿಷಯವಾರು ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಸುವರ್ಣಾ ನಾರ್ವೆಕರ, ಶಮಶಾದಬೇಗಂ ಕುಂದಗೋಳ, ಜ್ಯೋತಿ ರೇಡೆಕರ, ಜಯಶ್ರೀ ತಳವಾರ, ಲಕ್ಷ್ಮೀ ಸಪೂರಿ, ಚನ್ನಬಸವ್ವ ಹಿರೇಮಠ, ಶಕಿನಾಬಿ ಗುಂಜಾವತಿ ಅವರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಗರ್ಲ್ಸ್ ಇಂಗ್ಲಿಷ್ ಸ್ಕೂಲ್ ಮುಖ್ಯೋಪಾಧ್ಯಾಯ ಕೆ.ಐ. ಕೊಂಗಿ, ಆರ್.ಡಿ. ನೀಲಣ್ಣವರ, ಎಸ್.ಎಸ್. ವಿಜಾಪೂರ, ಪತ್ರಕರ್ತ ಪ್ರಭಾಕರ ನಾಯಕ, ನಿಂಗಪ್ಪ ದೊಡ್ಡಮನಿ, ಯಲ್ಲಪ್ಪ ಉಳ್ಳಾಗಡ್ಡಿ, ಜ್ಯೋತಿಬಾ ಕದಂ, ಮಂಜುನಾಥ ಭಂಡಾರೆ, ಪಿ.ಪಿ. ಬಾರಕೇರ, ಆರ್.ಕೆ. ಕಾಂಬಳೆ, ಎಸ್.ಎಸ್. ಸುಂಕದ, ಎಸ್.ಆರ್. ಹೆಗಡೆ ಇದ್ದರು.