wrestling: 3 ಚಿನ್ನದ ಪದಕ ತಂದ ಹಳಿಯಾಳದ ವಿದ್ಯಾರ್ಥಿಗಳು

wrestling
Published on

ಹಳಿಯಾಳ: ರಾಜ್ಯ ಮಟ್ಟದ ಕುಸ್ತಿ wrestling ಸ್ಪರ್ಧೆಯಲ್ಲಿ ಹಳಿಯಾಳದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.   ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 3ನೇ ಮಿನಿ ಒಲಂಪಿಕ್( 15 ವರ್ಷದೊಳಗಿನ ) ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳ ಕ್ರೀಡಾ ವಸತಿ ನಿಲಯದ ಬಾಲಕಿಯರ ವಿಭಾಗದಲ್ಲಿ 3 ಚಿನ್ನ, 2  ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.

wrestling ಹಾಸ್ಟೆಲ್‌ ವಿದ್ಯಾರ್ಥಿಗಳು

ಹಳಿಯಾಳದ ಕ್ರೀಡಾ ವಸತಿ ನಿಲಯದ ಬಾಲಕರು ಕೂಡ ಕ್ರೀಡೆಯಲ್ಲಿ ಭಾಗವಹಿಸಿದ್ದು ಬಾಲಕರ ವಿಭಾಗದಲ್ಲಿ ೧ ಬೆಳ್ಳಿ, ೨  ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ : ಸೌಂದರ್ಯ ವಾಲೇಕರ್ 50 ಕೆಜಿ ಪ್ರಥಮ, ಪೃಥ್ವಿ ಮಿರಜ್ಕರ್ 57 ಕೆಜಿ  ಪ್ರಥಮ, ಸವಿತಾ ಸಿದ್ದಿ 62 ಕೆಜಿ ಪ್ರಥಮ, ವೇಲೆನ್ಸಿಯ ಫರ್ನಾಂಡಿಸ್ 62 ಕೆಜಿ ದ್ವಿತೀಯ,  ಮಾರ್ಷಲಿನಾ ಸಿದ್ದಿ 68 ಕೆಜಿ ದ್ವಿತೀಯ, ಬಿಂದುಶ್ರೀ ಪಾಟೀಲ್ 58 ಕೆಜಿ ತೃತೀಯ, ಶೇರಿನಾ ಕಾಂಬ್ರೇಕರ್ 54ಕೆಜಿ ತೃತೀಯ.  ಬಾಲಕರ ವಿಭಾಗದಲ್ಲಿ  :-  ಶಂಕರಗೌಡ ಪಾಟೀಲ್48 ಕೆಜಿ ದ್ವಿತೀಯ, ಮಹಮ್ಮದ್   ಜುನೇದ್ ನದಾಫ್ 54 ಕೆಜಿ ತೃತೀಯ, ಮೋಹನ್ ಹಡಪದ್ 48 ಕೆಜಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಕುಸ್ತಿ ತರಬೇತಿದಾರ  ತುಕಾರಾಮ ಗೌಡ ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net