ಶಿರಸಿ: ಜಿಂಕೆಯನ್ನು ಬೇಟೆ ಆಡಿ ಮಾಂಸಕ್ಕಾಗಿ ಅರ್ಧ ಸುಲಿದಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ತಡರಾತ್ರಿ ಬಂಧಿಸಿದ್ದಾರೆ.
ಸೋಣಗಿ ಮನೆಯ ಗಣಪತಿ ಮಂಜುನಾಥ ಗೌಡ ಬಂಧಿತ. ಇನ್ನಿತರ ಆರೋಪಿತರಾದ ಉಂಚಳ್ಳಿಯ ವೆಂಕಟೇಶ ನಾಯ್ಕ, ಗಣೇಶ ನಾಯ್ಕ ತಲೆಮರೆಸಿಕೊಂಡಿದ್ದಾರೆ. ಡಿಎಫ್ಒ ಡಾ. ಅಜ್ಜಯ್ಯ ಜೆ.ಆರ್. ಮಾರ್ಗದರ್ಶನದಲ್ಲಿ ಎಸಿಎಫ್ ಎಸ್.ಎಸ್. ನಿಂಗಾಣಿ, ಗಿರೀಶ ನಾಯ್ಕ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.