

ಹೆಬ್ರಿ: ಹೆಬ್ರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹೆಬ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುಚ್ಚೂರು ಹೆರ್ಗ ವಿಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಬಹುಮಾನ ಪಡೆದರು.
ಪ್ರಬಂಧ ರಚನೆಯಲ್ಲಿ ಜಯಶ್ರೀ, ಮಿಮಿಕ್ರಿಯಲ್ಲಿ ರಮಿತ್, ಧಾರ್ಮಿಕ ಪಠಣ (ಅರೇಬಿಕ್)ನಲ್ಲಿ ಅಕ್ಸಾ, ಗಝಲ್‌ನಲ್ಲಿ ಐಶತುಲ್ ಲುಬ್ನಾ, ಜಾನಪದ ನೃತ್ಯದಲ್ಲಿ ಶ್ರೇಯಾ ಮತ್ತು ತಂಡ, ಕವ್ವಾಲಿಯಲ್ಲಿ ಹನಿಯಾ ಮತ್ತು ತಂಡ ಪ್ರಥಮ ಸ್ಥಾನ ಪಡೆದು ತಾಲೂಕುಮಟ್ಟಕ್ಕೆ ಆಯ್ಕೆಯಾಗಿರೆ. ಕನ್ನಡ ಭಾಷಣದಲ್ಲಿ ಅಪೇಕ್ಷಾಯು., ಹಿಂದಿ ಭಾಷಣದಲ್ಲಿ ತಸ್ಪಿ ಡಿ.ಶೆಟ್ಟಿ, ಚರ್ಚಾ ಸ್ಪರ್ಧೆಯಲ್ಲಿ ವೈಷ್ಣವಿ, ರಂಗೋಲಿ ಸ್ಪರ್ಧೆಯಲ್ಲಿ ಅನುಶ್ರೀ, ಕವನ ವಾಚನದಲ್ಲಿ ನಂದಿತಾ, ಆಶುಭಾಷಣದಲ್ಲಿ ಸೌಜಿತ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇಂಗ್ಲಿಷ್ ಭಾಷಣದಲ್ಲಿ ಶ್ರೇಯಾ, ಧಾರ್ಮಿಕ ಪಠಣ (ಸಂಸ್ಕೃತ)ದಲ್ಲಿ ಸನ್ನಿಧಿ, ಜಾನಪದ ಗೀತೆಯಲ್ಲಿ ಪ್ರಜೇಶ್, ಭಾವಗೀತೆಯಲ್ಲಿ ಅಭಿರಾಮಿ, ಚಿತ್ರಕಲೆಯಲ್ಲಿ ದಿಗಂತ್ ಹಾಗೂ ಕ್ವಿಜ್‌ನಲ್ಲಿ ನಂದೀಶ ಹಾಗೂ ಅಶ್ವಿತ್ ಜೆ.ಶೆಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ. ತಂಡದ ವ್ಯವಸ್ಥಾಪಕಿ ತುಳಸಿ ಇದ್ದರು.