

ಮುಂಡರಗಿ: ಸತತ ಪರಿಶ್ರಮಪಟ್ಟರೆ ಜೀವನದಲ್ಲಿ ಸಾಧನೆ ಸಾಧ್ಯವಾಗುತ್ತದೆ. ನಮ್ಮಗಳ ಅಭಿರುಚಿಗೆ ತಕ್ಕಂತೆ ಪೋ›ತ್ಸಾಹ ದೊರೆತರೆ ಸಾಧನೆ ಸುಲಭ. ಚಂದ್ರಯಾನ-3ರ ಯಶಸ್ಸಿನಲ್ಲಿ ನಾನು ಪಾಲುದಾರನಾಗಿದ್ದಕ್ಕೆ ಹೆಮ್ಮೆ ಇದೆ ಎಂದು ಇಸ್ರೋ ವಿಜ್ಞಾನಿ ಬಸವರಾಜ ಕಲ್ಲಕುಟಗರ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ಇಸ್ರೋ ವಿಜ್ಞಾನಿ ಬಸವರಾಜ ಕಲ್ಲಕುಟಗರ ಅವರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಂದ್ರಯಾನ-3 ಇಸ್ರೋದ ಯೋಜಿತ 3ನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆ. ಈಗ ಎಲ್ಲ ದೇಶಗಳ ಕಣ್ಣು ಭಾರತದತ್ತ ತಿರುಗಿದೆ. ಈಗ ಕ್ಷಣ-ಕ್ಷಣಕ್ಕೂ ಚಂದ್ರಯಾನ-3 ರ ಸ್ಥಿತಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲ ದೇಶಗಳದ್ದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ವಿಜ್ಞಾನಿ ಬಸವರಾಜ ಅವರು ಉತ್ತರಿಸಿದರು. ಮಹಾವಿದ್ಯಾಲಯ ಪರವಾಗಿ ಕಲ್ಲಕುಟಗರ ಅವರನ್ನು ಸನ್ಮಾನಿಸಲಾಯಿತು. ಪ್ರಶಿಕ್ಷಣಾರ್ಥಿಗಳಾದ ಕಿರಣ ಬಣಕಾರ ಮತ್ತು ಪ್ರಕಾಶ ಭಂಡಾರಿ ಶಿಕ್ಷಕರ ದಿನಾಚರಣೆ ಮತ್ತು ರಾಷ್ಟ್ರೀಯ ದಿನಾಚರಣೆ ಕುರಿತು ಮಾತನಾಡಿದರು.
ಪ್ರಾಚಾರ್ಯ ಸಿ.ಎಸ್. ಅರಸನಾಳ, ಪೊ›.ಎಸ್.ಕೆ. ಹೊಳೆಯಣ್ಣವರ, ದೈಹಿಕ ನಿರ್ದೇಶಕ ಶ್ರೀಕಾಂತ ಎಂ.ಎಲ್., ಪೊ›.ಎ.ಕೆ. ಮತ್ತೂರಮಠ, ಶಶಿಕಲಾ ಕುಕನೂರ, ಪೂಜಾ ಉಪ್ಪಿನಬೆಟಗೇರಿ, ಪೊ›. ಕೃಷ್ಣಾ ಬೇಲೇರಿ ಇದ್ದರು.
ಶಿವಕುಮಾರ ಹಳ್ಳಿಹುಡೇದ ಸ್ವಾಗತಿಸಿದರು. ಪೊ›. ರಾಜಶೇಖರ ಹುಲ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣ ಮೂಲಿಮನಿ ನಿರೂಪಿಸಿದರು. ನಿಂಗರಾಜ ಮೇಟಿ ವಂದಿಸಿದರು.