

ಪುತ್ತೂರು ಗ್ರಾಮಾಂತರ: ನೇಪಾಳದಲ್ಲಿ ನಡೆದ ಇಂಡೋ-ನೇಪಾಳ ಅಂತಾರಾಷ್ಟ್ರೀಯ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಕ್ರೀಡಾ ಚಾಂಪಿಯನ್‌ಷಿಪ್‌ನ ಕಿರಿಯ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಶಶಾಂಕ್ ರೈ ಅವರು ಪ್ರತಿನಿಧಿಸಿದ್ದ ಭಾರತ ತಂಡ ಪ್ರಥಮ ಸ್ಥಾನ ಪಡೆದಿದೆ.
ಸೋಮವಾರ ನಡೆದ ಕಿರಿಯ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಶಶಾಂಕ್ ರೈ ಪ್ರತಿನಿಧಿಸಿದ್ದರು. ಪ್ರಸ್ತುತ ಮಂಗಳೂರಿನ ಬಜ್ಪೆಯ ಎಸ್‌ಎನ್‌ಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಶಾಂಕ್ ರೈ ಬಡಗನ್ನೂರು ಗ್ರಾಮದ ಪಟ್ಟೆಯ ಸದಾನಂದ ರೈ ಮತ್ತು ಸವಿತಾ ರೈ ದಂಪತಿ ಪುತ್ರ. ಶಶಾಂಕ್ ರೈ ತರಬೇತುದಾರ ಚರಣ್ ಸಾಯಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.