ವೈಬ್ರೆಂಟ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ : ಚೆಸ್ ಪಂದ್ಯಾಟದಲ್ಲಿ ಸಾಧನೆ

New Project (18)
Published on

ಮೂಡುಬಿದಿರೆ: ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಈರ್ವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಥಮ ಪಿಯುಸಿಯ ಚೇತನಾ ಕುಮಾರಿ ಎಸ್. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ, ದ್ವಿತೀಯ ಪಿಯುಸಿಯ ಆರ್.ಕೃಷ್ಣ ಬಾಲಕರ ವಿಭಾಗದಲ್ಲಿ ಐದನೇ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ತಂಡದಿಂದ ಪ್ರಥಮ ಪಿಯುಸಿಯ ಪ್ರಜ್ವಲ್ ಎ.ಬಿ., ಸೌಮಿತ್ ಸುಮಂತ್ ಶಾನಭಾಗ್, ಸಂಹಿತ್ ರಾವ್, ಅಥರ್ವ ಬೋದಾಸ್, ಭವಿಷ್ ಗೌಡ ಜಿ.ಎಸ್. ಹಾಗೂ ಬಾಲಕಿಯರ ತಂಡದಿಂದ ಪ್ರಥಮ ಪಿಯುಸಿಯ ವೈಷ್ಣವಿ ಕೃಷ್ಣಾಜಿ ಪೂಜಾರಿ, ವರ್ಷಾ ಆರ್, ದ್ವಿತೀಯ ಪಿಯುಸಿಯ ಅನುಷ್ಕಾ ಆರ್, ಚೈತನ್ಯ ಪಿ, ಅನರ್ಘ್ಯ ಎನ್. ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿ ರನ್ನರ್‌ಅಪ್ ಪ್ರಶಸ್ತಿ ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ವೈಬ್ರೆಂಟ್ ಎಜುಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೆಕರ್, ಸುಭಾಷ್ ಝಾ, ಡಾ.ಎಸ್.ಎನ್.ವೆಂಕಟೇಶ್ ನಾಯಕ್ ಮತ್ತು ಶರತ್ ಗೋರೆ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net