ಈಶ್ವರಮಂಗಲದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ : ಏ.9ರಿಂದ ಹನುಮಗಿರಿಯಲ್ಲಿ ಬ್ರಹ್ಮಕಲಶೋತ್ಸವ ಆರಂಭ

New Project (7)
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಈಶ್ವರಮಂಗಲದ ಹನುಮಗಿರಿಯ ಶ್ರೀ ಕೋದಂಡರಾಮ- ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಏಪ್ರಿಲ್ 9ರಿಂದ ಆರಂಭಗೊಂಡು 12ರ ತನಕ ನಡೆಸುವುದೆಂದು ತೀರ್ಮಾನಿಸಲಾಗಿದೆ.

ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ರೂಪರೇಷೆ ತಯಾರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ಭಾನುವಾರ ಹನುಮಗಿರಿಯ ವೈದೇಹಿ ಸಭಾಭವನದಲ್ಲಿ ನಡೆಯಿತು.

ಬ್ರಹ್ಮಕಲಶೋತ್ಸವ ನೇತೃತ್ವ ವಹಿಸಿರುವ ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿ, ಹನುಮಗಿರಿ ಕ್ಷೇತ್ರ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕ್ಷೇತ್ರವಾಗಿದೆ. ಈ ಕ್ಷೇತ್ರವು ಪ್ರವಾಸೋದ್ಯಮ ತಾಣವಾಗಿ ಇನ್ನಷ್ಟು ಬೆಳಗಬೇಕಿದೆ. ಈ ನಿಟ್ಟಿನಲ್ಲಿ ಇಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ವ್ಯವಸ್ಥಿತ ರೀತಿಯಲ್ಲಿ ಯಶಸ್ವಿಯಾಗಿ ನಡೆಯಬೇಕು. ಇದಕ್ಕೆ ಎಲ್ಲರ ಅಭಿಪ್ರಾಯ- ಸಹಕಾರ ಬೇಕು ಎಂದರು.

ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು. ನವರಾತ್ರಿ ಬಳಿಕ ದಿನ ನಿಗದಿಪಡಿಸಿ ಎಲ್ಲ ಭಕ್ತರನ್ನು ಸೇರಿಸಿ ಬ್ರಹ್ಮಕಲಶೋತ್ಸವ ಸಮಿತಿ ರಚಿಸುವುದು ಎಂದು ತೀರ್ಮಾನಿಸಲಾಯಿತು.

ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಕ್ಷೇತ್ರದ ಧರ್ಮದರ್ಶಿಗಳಾದ ರಘುರಾಜ್ ಕೆ.ಕೊನೆತೋಟ, ಶಿವರಾಮ ಶರ್ಮ ಕತ್ರಿಬೈಲು ಉಪಸ್ಥಿತರಿದ್ದರು. ಶ್ರೀಕೃಷ್ಣ ಭಟ್ ಮುಂಡ್ಯ, ರವಿಕಿರಣ್ ಶೆಟ್ಟಿ ಬೆದ್ರಾಡಿ, ನಾಗಪ್ಪ ಗೌಡ ಬೊಮ್ಮೆಟ್ಟಿ, ಮಂಜುನಾಥ ರೈ ಸಾಂತ್ಯ, ರತನ್ ನೈಾಕ್ ಕರ್ನೂರುಗುತ್ತು, ಶ್ರೀನಿವಾಸ ಭಟ್ ಚಂದುಕೂಡ್ಲು, ಭಾಸ್ಕರ ರೈ ಕಂಟ್ರಮಜಲು, ಶ್ರೀರಾಮ ಪಕ್ಕಳ ಕರ್ನೂರುಗುತ್ತು, ನಹುಷಾ ಪಳನೀರು, ಮೋಹನ್‌ದಾಸ್ ಶೆಟ್ಟಿ ನೂಜಿಬೈಲು, ವಿಶ್ವನಾಥ ಗೌಡ ಅಡೀಲು, ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ, ಶಿವಪ್ರಸಾದ್ ಕೊಚ್ಚಿ, ಜತ್ತಪ್ಪ ಗೌಡ ಕೊಂಕಣಿಗುಂಡಿ, ಐ.ರುದ್ರಯ್ಯ ಮಾಸ್ಟರ್, ಶಿವ ಎಸ್.ಪೂಜಾರಿ ನಿಸರ್ಗ, ನಾರಾಯಣ ಗೌಡ ಉರ್ಕ್ಯಾಡಿ, ಹರಿಪ್ರಸಾದ್ ರೈ ಸಾಂತ್ಯ, ದೀಪಕ್ ಮುಂಡ್ಯ, ಮಹಾಲಿಂಗ ಪಾಟಾಳಿ ಪಂಚೋಡಿ, ಅಪ್ಪಕುಂಞಿ ಮಣಿಯಾಣಿ, ಜಯರಾಮ ರೈ ಗಜಾನನ ಮತ್ತಿತರರಿದ್ದರು. ಕ್ಷೇತ್ರದ ಧರ್ಮದರ್ಶಿ ಶಿವರಾಮ ಪಿ.ಈಶ್ವರಮಂಗಲ ಸ್ವಾಗತಿಸಿದರು.

ಏ.9ರಿಂದ 12ರ ತನಕ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. 12ರಂದು ಕ್ಷೇತ್ರದ ಕೋದಂಡರಾಮ ದೇವರಿಗೆ, ಪಂಚಮುಖಿ ಆಂಜನೇಯ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಆರಂಭದಲ್ಲಿ ಕೋದಂಡರಾಮ ದೇವರಿಗೆ, ಬಳಿಕ ಪಂಚಮುಖಿ ಆಂಜನೇಯ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯುವಂತೆ ದೈವಜ್ಞರ ಮಾರ್ಗದರ್ಶನ ಸಿಕ್ಕಿದೆ. ನನ್ಯ ಅಚ್ಚುತ ಮೂಡೆತ್ತಾಯ, ಕ್ಷೇತ್ರದ ಆಡಳಿತ ಧರ್ಮದರ್ಶಿ https://www.vijayavani.net/guru-jayanti-invitation-card-released https://www.vijayavani.net/accident-zone-kumbra-circle

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net