ಸಾಧನೆಗೆ ಸಹಕರಿಸಿದವರ ಸ್ಮರಿಸಲು ಸಲಹೆ ಕೊಟ್ಟ ಶಾಸಕ ಚಂದ್ರಪ್ಪ

achievement, cooperation, memory, advice,
Published on

ಭರಮಸಾಗರ: ತಂದೆ-ತಾಯಿ, ಗುರು-ಹಿರಿಯರು ಹಾಗೂ ಜೀವನದಲ್ಲಿ ನಿಮ್ಮಗಳ ಸಾಧನೆಗೆ ಸಹಕರಿಸಿದ ವ್ಯಕ್ತಿಗಳನ್ನು ಸದಾ ಸ್ಮರಿಸುವ ಗುಣ ಬೆಳೆಸಿಕೊಳ್ಳಿ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ದೊಡ್ಡ ನಗರ ಪ್ರದೇಶದ ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗುವುದು ಸಹಜ. ಆದರೆ, ಹಳ್ಳಿಗಾಡಿನ ಮಕ್ಕಳು ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಹೋಗಬೇಕು. ಹಲವರು ಓದುವುದನ್ನೇ ನಿಲ್ಲಿಸುತ್ತಾರೆ.

ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಭರಮಸಾಗರದಲ್ಲಿ ಸರ್ಕಾರಿ ಐಟಿಐ ಕಾಲೇಜು ಆರಂಭಿಸಿ, ಈ ಮೂಲಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಯಿತು ಎಂದರು.

ರ‌್ಯಾಂಕ್ ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಪ್ರಾಂಶುಪಾಲೆ ಡಾ.ಎಸ್.ಶಶಿಕಲಾ, ಎಚ್.ಎಂ.ಮಂಜುನಾಥ್, ಡಿ.ಎಸ್.ಪ್ರವೀಣ್‌ಕುಮಾರ್, ಚಂದ್ರಶೇಖರ್, ಸತ್ಯನಾರಾಯಣ, ಚಂದ್ರಕುಮಾರ್, ವಿದ್ಯಾರ್ಥಿಗಳಾದ ಪೂಜಾ, ಸಂಗೀತಾ, ಮಾಧುರಿ, ಅನುಷಾ, ನಿಸಾರ್ ಅಹಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net