ಸಿಕ್ಕ ಅವಕಾಶಗಳ ಸದ್ಭಳಕೆಯಿಂದ ಸಾಧನೆ

Hbr
ಸಂಪನ್ಮೂಲ ವ್ಯಕ್ತಿ ಸೌಜನ್ಯಾ ಶೆಟ್ಟಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
Published on

ಹೆಬ್ರಿ: ಪ್ರಪಂಚದಲ್ಲಿ ಶೇಕಡಾ ನೂರರಷ್ಟು ಪರಿಪೂರ್ಣನಾದ ವ್ಯಕ್ತಿ ಯಾರು ಇಲ್ಲ. ಕೊರತೆಯನ್ನು ಮೆಟ್ಟಿ ಮುನ್ನುಗ್ಗಬೇಕೆ ಹೊರತು ಬೇರೆ ಬೇರೆ ಕಾರಣಗಳಿಗೆ ಕೀಳರಿಮೆಗೆ ಒಳಗಾಗಬಾರದು. ಸಿಕ್ಕಿರುವ ಅವಕಾಶ ಬಳಸಿಕೊಂಡು ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯುವಂಥ ಪ್ರಯತ್ನ ಮಾಡಬೇಕು. ವಿದ್ಯೆಗಿಂತ ದೊಡ್ಡ ಸಂಪತ್ತು ಭೂಮಿಯಲ್ಲಿ ಯಾವುದು ಇಲ್ಲ ಎಂದು ಸಂಪನ್ಮೂಲ ವ್ಯಕ್ತಿ, ಎ.ವಿ.ಬಾಳಿಗ ಹಾಸ್ಪಿಟಲ್ ಉಡುಪಿಯ ಸೌಜನ್ಯಾ ಶೆಟ್ಟಿ ಹೇಳಿದರು.

ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಟ್ರಸ್ಟ್‌ನ ಸದಸ್ಯ ವಿಷ್ಣುಮೂರ್ತಿ ನಾಯಕ್, ಪ್ರಾಂಶುಪಾಲ ಪ್ರಕಾಶ್ ಜೋಗಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ವಾಣಿಜ್ಯ ವಿಭಾಗದ ಹಿರಿಯ ಉಪನ್ಯಾಸಕಿ ಅನುಸೂಯ ಮಲ್ಯ, ಉಪನ್ಯಾಸಕರು ಉಪಸ್ಥಿತರಿದ್ದರು.

ಆಂಗ್ಲ ಭಾಷೆ ಉಪನ್ಯಾಸಕಿ ಜ್ಯೋತಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net