

ಅರಕಲಗೂಡು: ತಾಲೂಕಿನ ಮೋಕಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಹಾಗೂ 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ವಿದ್ವಾನ್ ಆರ್.ಕೆ. ಪದ್ಮನಾಭ ಅಭಿಮಾನಿ ಬಳಗದ ಮುಖಂಡ ರಮೇಶ್ ವಾಟಾಳ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲೇ ನಾಡು, ನುಡಿ ಕುರಿತು ಅಭಿಮಾನ ಬೆಳೆಸಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಪಡೆಯುವ ಜತೆಗೆ ಕ್ರೀಡಾ ಕ್ಷೇತ್ರದಲ್ಲೂ ಉನ್ನತ ಸಾಧನೆ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ರಾಜ್ಯ ಮಟ್ಟದ ಕ್ರೀಡಾಕೂಟದ ಟ್ರಿಪಲ್ ಜಂಪ್‌ನಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮೋಕಲಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಎಂ.ಯು. ನಿಶಾನ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಎಚ್.ಎಂ. ಕೊಟ್ಟೂರಯ್ಯ, ದೈಹಿಕ ಶಿಕ್ಷಕ ಜಿ.ಎಸ್.ಪುರುಷೋತ್ತಮ್, ಶಿಕ್ಷಕರಾದ ಗೌತಮಿ, ಶಶಿಧರ್, ವಿದ್ವಾನ್ ಆರ್.ಕೆ.ಪಿ.ಬಳಗದ ಮನು, ನಟರಾಜ್, ಶ್ರೀಧರ್ ರಾಜ್, ಧನಂಜಯ, ಹೇಮರಾಜ್, ಪ್ರವೀಣ್, ಎಂ.ಆರ್.ಪುನೀತ್ ಗೌಡ, ಎ.ಬಿ. ಯತಿರಾಜ್, ಎ.ಪಿ. ನಾಗೇಶ್, ಗುರು ಇತರರು ಇದ್ದರು.