ವರ್ಕಾಡಿಯಿಂದ ಕಳವುಗೈದ ಆರೋಪಿ ಸೆರೆ

New Project (31)
Published on

ಮಂಜೇಶ್ವರ: ಆರಾಧನಾಲಯ ಹಾಗೂ ವ್ಯಾಪಾರ ಸಂಸ್ಥೆಯಿಂದ ಕಳವು ನಡೆಸಿದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ.

ಕರ್ನಾಟಕದ ಚಿಕ್ಕಮಗಳೂರು ಕೃಷ್ಣನಗರ ನಿವಾಸಿ ಅಶ್ರಫ್ ಯಾನೆ ಮೊಹಮ್ಮದ್ ಅಶ್ರಫ್ (42) ಎಂಬಾತ ಬಂಧಿತ ಆರೋಪಿ. ಮಂಜೇಶ್ವರ ಪೊಲೀಸರ ತಂಡ ಆರೋಪಿಯನ್ನು ಮಲಪ್ಪುರಂನ ಅಮರಂಬಲಂ ಎಂಬಲ್ಲಿಂದ ಸೆರೆ ಹಿಡಿದಿದೆ.

ಇತ್ತೀಚೆಗೆ ವರ್ಕಾಡಿ ಬಜಿಲಕರಿಯ ಎಂಬಲ್ಲಿನ ಬಾಲ ಏಸು ಪ್ರಾರ್ಥನಾ ಮಂದಿರ, ಪಾವಳದಲ್ಲಿ ಶ್ರೀ ಕೊರಗಜ್ಜ ಕಟ್ಟೆಯ ಕಾಣಿಕೆ ಹುಂಡಿ, ಮೂರುಗೋಳಿ ಸಮೀಪ ಪಾಡಿ ಎಂಬಲ್ಲಿ ಒಂದು ಅಂಗಡಿಯಿಂದ ಕಳವು ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರಿಗೆ ಆರೋಪಿಯ ಕುರಿತು ಸುಳಿವು ಲಭಿಸಿತ್ತು. ಇದರಿಂದ ಈತನ ಮೇಲೆ ನಿಗಾ ಇರಿಸಿದ್ದು, ಈ ವೇಳೆ ಮಲಪ್ಪುರಂನಲ್ಲಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net