

ಗುರುಪುರ: ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲೆ ಮೇಲ್ಮನೆಯಲ್ಲಿ ನ ವಾಹನ ಸಂಚಾರ ನಿಷೇಧಗೊಳಿಸಲಾದ ಕಿರು ಸೇತುವೆಗೆ ಪರ್ಯಾಯವಾಗಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಆಗ್ರಹಿಸಿ ನ.26ರಂದು ಬೆಳಗ್ಗೆ 10 ಕ್ಕೆ ಉಳಾಯಿಬೆಟ್ಟಿಗೆ ಸಂಪರ್ಕ ಕಲ್ಪಿಸುವ ಪರಾರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಲು ಉಳಾಯಿಬೆಟ್ಟು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಕಿರು ಸೇತುವೆಯಲ್ಲಿ ನ ವಾಹನ ನಿಷೇಧದ ಬಳಿಕ ಈ ಭಾಗದ ಶಾಲಾ ಕಾಲೇಜು, ಕೂಲಿ ಕಾರ್ಮಿಕರು, ಮಹಿಳೆಯರು, ವೃದ್ಧರ ಸಹಿತ ಸಾರ್ವಜನಿಕರ ಪ್ರಯಾಣ ದುಸ್ತರವಾಗಿದೆ. ಒಂದೆರಡು ಕಿ.ಮೀ. ಅಂತರದ ಪ್ರದೇಶಗಳಿಗೆ 7ರಿಂದ 8 ಕಿ.ಮೀ. ಸುತ್ತಿಬಳಸಿ ಪ್ರಯಾಣಿಸಬೇಕಾಗುತ್ತದೆ. ಇದರಿಂದ ಸಮಯ, ಹಣಕಾಸು ನಷ್ಟ ಎಂದು ಸ್ಥಳೀಯರು ದೂರಿದ್ದಾರೆ.
ನಾಗರಿಕರ ಸಮಸ್ಯೆಗೆ ಸ್ಪಂದಿಸಿದ ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆಯ ಉನ್ನತಾಧಿಕಾರಿಗಳ ಜೊತೆಯಲ್ಲಿ ಎರಡೆರಡು ಬಾರಿ ವಾತುಕತೆ ನಡೆಸಿ, ಮನವಿ ನೀಡಿದ್ದರೂ, ಈವರೆಗೆ ಪ್ರಯೋಜನವಾಗಿಲ್ಲ. ಈ ಹಿಂದೆ ನ.13ರಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಉಳಾಯಿಬೆಟ್ಟು ಗ್ರಾಮಸ್ಥರು ಕರೆ ನೀಡಿದಾಗ ಎಚ್ಚೆತ್ತುಕೊಂಡಿದ್ದ ಪಿಡಬ್ಲುೃಡಿ ಇಲಾಖೆ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಅವರನ್ನು ಸ್ಥಳಕ್ಕೆ ಕಳುಹಿಸಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಸ್ಥಳ ಪರಿಶೀಲಿಸುವಂತೆ ಸೂಚಿಸಿತ್ತು.
ಪಿಡಬ್ಲ್ಯುಡಿ ಎಇ ಶ್ರೀಕಾಂತ್ ಅವರು ಸ್ಥಳ ಪರಿಶೀಲನೆ ನಡೆಸಿ ಕಿರು ಸೇತುವೆಗೆ ಪರ್ಯಾಯವಾಗಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಅವಕಾಶವಿದೆ. ನ.16ರೊಳಗೆ ಕಾಮಗಾರಿ ಆರಂಭಗೊಳಿಸಬಹುದು. ಕಾಮಗಾರಿಗೆ ತಗಲುವ ಒಟ್ಟು ವೆಚ್ಚದ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಭರವಸೆ ನೀಡಿದ್ದರು.
ಆದರೆ ನ.16ರ ವರೆಗೂ ಕಾಮಗಾರಿ ಆರಂಭಿಸುವ ಸೂಚನೆ ಕಂಡು ಬಂದಿಲ್ಲ. ಇದೀಗ ತಾತ್ಕಾಲಿಕ ರಸ್ತೆ ನಿರ್ವಾಣಕ್ಕಾಗಿ ಗ್ರಾಮಸ್ಥರಿಂದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಉಳಾಯಿಬೆಟ್ಟು ಗ್ರಾ.ಪಂ. ಅಧ್ಯಕ್ಷ ಹರಿಕೇಶ್ ಶೆಟ್ಟಿ ಅವರು ನ.18ರಂದು ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ ಅವರೊಂದಿಗೆ ಮತ್ತೊಂದು ಬಾರಿ ವಾತುಕತೆ ನಡೆಸಿದರು.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ವಾತುಕತೆ ನಡೆಸಿದ ವೇಳೆ, ಉಳಾಯಿಬೆಟ್ಟಿನಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸಲು ಸೂಚಿಸಿದ್ದಾರೆ. ಆದರೆ ಉಳಾಯಿಬೆಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸುವುದಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹರ್ಷವರ್ಧನ ಹೇಳಿದ್ದರೂ, ಈವರೆಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ತೀವ್ರ ನಿರಾಸೆ ಹೊಂದಿರುವ ಗ್ರಾಮಸ್ಥರು ನ.26ರಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ತೀರ್ವಾನಿಸಿದ್ದಾರೆ ಎಂದು ಉಳಾಯಿಬೆಟ್ಟು ಗ್ರಾ.ಪಂ. ಅಧ್ಯಕ್ಷರು ತಿಳಿಸಿದರು.
ಉಳಾಯಿಬೆಟ್ಟು ಸೇತುವೆಯಲ್ಲಿ ನ ವಾಹನ ನಿಷೇಧಿಸಲಾದ ಬಳಿಕ ಶಾಲಾ-ಕಾಲೇಜುಗಳ ಬಸ್‌ಗಳು ಮತ್ತು ಸರ್ಕಾರಿ, ಖಾಸಗಿ ಬಸ್‌ಗಳ ಸಂಚಾರ ರದ್ದಾಗಿದ್ದರೂ, 34 ಯೂನಿಟ್ ಭಾರದ ಸರಕು ಹೊತ್ತ ನ ವಾಹನಗಳು ಯಾವುದೇ ಮುಲಾಜಿಲ್ಲದೆ ಸಂಚರಿಸುತ್ತಿವೆ. ಹೀಗಾಗಿ ನ ವಾಹನ ಸಂಚಾರ ನಿಷೇಧಿಸಲು ಇಲಾಖೆ ಯಾವ ವಾನದಂಡ ಅಳವಡಿಸಿಕೊಂಡಿದೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಇನ್ನೊಂದೆಡೆ ನ ವಾಹನ ಸಂಚಾರ ನಿಷೇಧಕ್ಕಾಗಿ ಸೇತುವೆಯ ಎರಡೂ ಕಡೆ ಕವಾನು ಅಳವಡಿಸಲಾಗಿದೆ. ಈಗ ಇದರಲ್ಲಿ ಒಂದು ಕವಾನು ನುಜ್ಜುಗುಜ್ಜಾಗಿದೆ. ಇದು ಹೇಗೆ ಮತ್ತು ಯಾರಿಂದ ನಡೆದ ಕೃತ್ಯ ಎಂದು ಇಲಾಖೆ ಪ್ರಶ್ನಿಸಿ, ಕ್ರಮ ಕೈಗೊಂಡಿದೆಯೇ ? ಪ್ರಯಾಣಿಕರಿಗೆ ತೊಂದರೆ ಕೊಡಲೆಂದೇ ಜಿಲ್ಲಾಡಳಿತವು ಕಿರು ಸೇತುವೆ ನಿಷೇಧಿಸಿದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. - ಹರಿಕೇಶ್ ಶೆಟ್ಟಿ, ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ. https://www.vijayavani.net/many-power-outages-on-november-26 https://www.vijayavani.net/mangalore-sarojini-madusudana-kushe-school-saroj-kalothsava