ಕಡವೆ ಮಾಂಸ ಸಂಗ್ರಹಿಸಿದ್ದ ಆರೋಪಿ ಬಂಧನ

14 HANUR 6
Published on

ಹನೂರು: ತಾಲೂಕಿನ ಮಿಣ್ಯಂ ಗ್ರಾಮದ ತೋಟದ ಮನೆಯಲ್ಲಿ ಕಡವೆ ಮಾಂಸವನ್ನು ಸಂಗ್ರಹಿಸಿದ್ದ ಆರೋಪಿಯನ್ನು ಬುಧವಾರ ಸಂಜೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.


ಗ್ರಾಮದ ಗೋವಿಂದ (50) ಬಂಧಿತ ಆರೋಪಿ. ಈತ ಜಮೀನಿನ ಮನೆಯಲ್ಲಿ ಕಡವೆಯ ಒಣ ಮಾಂಸವನ್ನು ಸಂಗ್ರಹಿಸಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಂಜೆ 5ರ ವೇಳೆಯಲ್ಲಿ ಹೂಗ್ಯಂ ವನ್ಯಜೀವಿ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಶೋಧಕಾರ್ಯ ನಡೆಸಿದಾಗ 7 ಕೆ.ಜಿ.ಒಣ ಮಾಂಸ ದೊರಕಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net