ಹುಂಡಿ ಹಣ ಕದ್ದ ಆರೋಪಿ ಬಂಧನ

SHIVA KUMAR
Published on

ಹನೂರು: ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಮಾರಮ್ಮನ ದೇಗುಲ ಹಾಗೂ ಅಜ್ಜೀಪುರದ ಕಣಿವೆ ಆಂಜನೇಯಸ್ವಾಮಿ ದೇಗುಲದಲ್ಲಿ ಹುಂಡಿ ಒಡೆದು ಹಣ ಕದ್ದೊಯ್ದಿದ್ದ ಆರೋಪಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕೋಟೆಮಾಳದ ಶಿವಕುಮಾರ್ ಬಂಧಿತ ಆರೋಪಿ. ಈತ ಒಂದೂವರೆ ತಿಂಗಳ ಹಿಂದೆ ಕೆಂಪಯ್ಯನಹಟ್ಟಿ ದೇಗುಲದ ಹುಂಡಿಯನ್ನು ಒಡೆದು ಹಣವನ್ನು ಕದ್ದೊಯ್ದಿದ್ದ. ಇದೇ ರೀತಿ ಕೆಲ ದಿನಗಳ ಬಳಿಕ ಅಜ್ಜೀಪುರ ಸಮೀಪದ ಕಣಿವೆ ಆಂಜನೇಯ ಸ್ವಾಮಿ ದೇಗುಲದಲ್ಲೂ ಹುಂಡಿ ಹಣವನ್ನು ಕದ್ದೊಯ್ಯಲಾಗಿತ್ತು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

ಡಿವೈಎಸ್ಪಿ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ಹಾಗೂ ಸಬ್ ಇನ್‌ಸ್ಪೆಕ್ಟರ್ ಲೋಕೇಶ್ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net