

ಕಾಸರಗೋಡು: ನೆಲ್ಲಿಕುಂಜೆಯಲ್ಲಿ ಮನೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಅಡುಗೆ ಕೋಣೆ ಸುಟ್ಟು ಕರಕಲಾಗಿದೆ. ನೆಲ್ಲಿಕುಂಜೆಯ ಮುಹಿಯುದ್ದೀನ್ ಮಸೀದಿ ರಸ್ತೆ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಎನ್.ಎಂ.ಮುಹಮ್ಮದಲಿ ಅವರ ಮನೆಯಲ್ಲಿ ಗುರುವಾರ ನಸುಕಿನ ಜಾವ ಬೆಂಕಿ ಆಕಸ್ಮಿಕವುಂಟಾಗಿದೆ.
ಅಡುಗೆ ಮನೆಯ ಬಳಿ ಬಟ್ಟೆ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಾಸಿಗೆ, ಬಟ್ಟೆ, ಮೇಲ್ಚಾವಣಿ, ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಹೆಂಚು ಹಾಸಿನ ಮನೆ ಇದಾಗಿದ್ದು, ಬೆಂಕಿ ಆಕಸ್ಮಿಕ ಸಂದರ್ಭ ಮನೆಯಲ್ಲಿ ಮುಹಮ್ಮದಾಲಿ ಅವರ ತಾಯಿ ನಫೀಸಾ, ಪತ್ನಿ ಶಮೀಮಾ ಹಾಗೂ ಮಕ್ಕಳು ಇದ್ದರು. ಬೆಂಕಿ ವ್ಯಾಪಿಸುತ್ತಿದ್ದಂತೆ ಮನೆಯವರು ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವೆನ್ನಲಾಗಿದೆ.