ಲಾರಿ ಡಿಕ್ಕಿ, ಮಹಿಳೆ ಸಾವು

CRIME LOGO
Published on

ಕಲಬುರಗಿ: ಡೀಸೆಲ್ ಲಾರಿ ಡಿಕ್ಕಿಯಾಗಿ ಭಿಕ್ಷುಕಿಯೊಬ್ಬಳ ಮೃತಪಟ್ಟ ಘಟನೆ ನಗರದ ಖರ್ಗೆ ಸರ್ಕಲ್ ಬಳಿ ನಡೆದಿದೆ. ಕಳೆದ ಹಲವು ದಿನಗಳಿಂದ ಸಿಗ್ನಲ್ ಬಳಿ ಭಿಕ್ಷೆ ಬೇಡುತ್ತಿದ್ದ ಮಲ್ಲಮ್ಮ ಸಾಯಬಣ್ಣ(೬೪) ಮೃತ ಮಹಿಳೆ. ಕುಷ್ಠರೋಗದಿಂದ ಬಳಲುತ್ತಿದ್ದಳು. ಸರ್ಕಲ್‌ನ ರಸ್ತೆಯ ಮಧ್ಯದ ಡಿವೈಡರ್ ಬಳಿ ನಿಂತಿದ್ದಾಗ ಡೀಸೆಲ್ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಬಿದ್ದಾಗ ಮಹಿಳೆ ಕೈ, ಕಾಲು ಮೇಲಿಂದ ಲಾರಿ ಹರಿದು ಹೋಗಿದೆ. ಪತಿಯ ಊರು ಪತಿ ಜೇವರ್ಗಿ ತಾಲೂಕಿನ ನರಿಬೋಳ ಆಗಿದ್ದು, ಚಿತ್ತಾಪುರ ತಾಲೂಕಿನ ಭಾಗೋಡಿ ತವರೂರು ಆಗಿದೆ. ಸಂಚಾರ ಪೊಲೀಸ್ ಠಾಣೆ -೨ರಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net