

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ-ಅಫಜಲಪುರ ರಸ್ತೆಯಲ್ಲಿರುವ ಶರಣಸಿರಸಗಿ ಸಮೀಪದ ಸೀಮೆ ನಾಗದೇವತೆ ಗುಡಿಯ ಹತ್ತಿರದಲ್ಲಿ ಟಂಟಂ ಪಲ್ಟಿ ಹೊಡೆದು ಯುವಕ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದಾರೆ.
ಸಿದ್ಧಾರೂಡ ಗೌನಳ್ಳಿ (೧೮) ಮೃತಪಟ್ಟ ಯುವಕ. ಮೇಳಕುಂದಾ (ಬಿ) ಗ್ರಾಮದ ನಿವಾಸಿಯಾಗಿದ್ದರು. ಗೊಬ್ಬೂರ ಸಮೀಪದಲ್ಲಿ ರೇಷ್ಮೆ ಸಾಕಾಣಿಕೆ ಕೇಂದ್ರದಿAದ ರೇಷ್ಮೆ ಹುಳುಗಳನ್ನು ಟಂಟAನಲ್ಲಿ ತೆಗೆದುಕೊಂಡು ಹೋಗುವಾಗ ರಸ್ತೆಯಲ್ಲಿ ಅಡ್ಡಲಾಗಿ ಬಂದ ಹಂದಿಗೆ ಟಂಟA ಡಿಕ್ಕಿ ಹೊಡೆದು ಬಳಿಕ ಪಲ್ಟಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಸಂಚಾರ ಠಾಣೆ-೧ರಲ್ಲಿ ಪ್ರಕರಣ ದಾಖಲಾಗಿದೆ.