ತಿಂಗಳ ಹಿಂದೆ ಮದುವೆಯಾಗಿದ್ದವಳು ಅಪಘಾತಕ್ಕೆ ಬಲಿ! ಗಂಡನ ಸ್ಥಿತಿ ಗಂಭೀರ

accc
Published on

ಬೆಂಗಳೂರು: ತಿಂಗಳ ಹಿಂದಷ್ಟೇ ಮದುವೆಯಾಗಿ, ಹೊಸ ಜೀವನದ ಕನಸನ್ನು ಕಂಡಿದ್ದ ಯುವತಿಯೊಬ್ಬಳು ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಮೂಲತಃ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ಧನುಷಾ(23) ಮೃತಪಟ್ಟ ದುರ್ದೈವಿ. ಈಕೆಗೆ ಫೆ.21 ರಂದು ನಡೆದಿದ್ದ ಗೋಪಿಕ್ ಜತೆಗೆ ಮದುವೆಯಾಗಿತ್ತು. ಅದಾದ ನಂತರ ಆಕೆ ಪುತ್ತೂರು ತಾಲೂಕಿನ ದಾರಂದಕುಕ್ಕುವಿನ‌‌ ಗಂಡನೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದಳು. ನವದಂಪತಿ ಸಂಬಂಧಿಕರ ಮನೆಗೆ ತೆರಳುವುದಕ್ಕಾಗಿ ಪುತ್ತೂರಿನಿಂದ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಅವರಿದ್ದ ವ್ಯಾಗನಾರ್​ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಧನುಷಾ ಮೃತಳಾಗಿದ್ದಾಳೆ. ಆಕೆಯ ಪತಿ ಗೋಪಿಕ್ ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net