ಎರಡೇ ದಿನಕ್ಕೆ ವಿಲನ್​ ಆದ ಚಕ್ರವರ್ತಿ ಚಂದ್ರಚೂಡ್​! ಮನೆ ಮಂದಿಯಿಂದ ಸಿಕ್ತು ಮೈನಸ್​, ಜೀರೋ ಮಾರ್ಕ್ಸ್​

bb
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ರ ಸ್ಪರ್ಧಾಳುಗಳ ನಿಜ ಬಣ್ಣ ಒಂದೊಂದಾಗಿ ಹೊರಬೀಳುತ್ತಿದೆ. ಅಷ್ಟರಲ್ಲಾಗಲೇ ವೈಲ್ಡ್​ ಕಾರ್ಡ್​ ಎಂಟ್ರಿ ಕೂಡ ಆಗಿದೆ. ಹಲವು ವಾರಗಳಿಂದ ಜತೆಗಿದ್ದವರ ನಡುವೆ ಇದೀಗ ಪತ್ರಕರ್ತ, ನಿರ್ದೇಶಕ, ನಟ ಚಕ್ರವರ್ತಿ ಚಂದ್ರಚೂಡ್​ ಸೇರಿಕೊಂಡಿದ್ದಾರೆ. ಆದರೆ ಅವರು ಮನೆಗೆ ಹೋಗಿ ಎರಡೇ ದಿನಗಳಲ್ಲಿ ಮನೆ ಮಂದಿಯೆಲ್ಲ ಅವರ ವಿರುದ್ಧ ತಿರುಗಿ ಬಿದ್ದಿರುವುದು ಕಂಡುಬಂದಿದೆ.

ಇಂದು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಪ್ರೋಮೋವನ್ನು ಬಿಡಲಾಗಿದೆ. ಅದರಲ್ಲಿ ಸ್ಪರ್ಧಾಳುಗಳ ಚಕ್ರವರ್ತಿ ಅವರ ವಿರುದ್ಧ ಅಸಮಾಧಾನ ಹೊರಹಾಕಿರುವುದನ್ನು ನೀವು ಕಾಣಬಹುದು.

ಚಕ್ರವರ್ತಿ ಅವರಿಗೆ ನೀವು 1ರಿಂದ 10ರಲ್ಲಿ ಎಷ್ಟಾದರೂ ಅಂಕ ಕೊಡಬಹುದು ಎಂದು ಸುದೀಪ್ ಹೇಳುತ್ತಾರೆ. ಆಗ ಅರವಿಂದ್​ ಅವರಿಗೆ ಸೊನ್ನೆ ಕೊಟ್ಟರೆ, ಇನ್ನೊಬ್ಬರು ಅರ್ಧ ಕೊಡುತ್ತಾರೆ. ಚಕ್ರವರ್ತಿಗೆ 20 ವರ್ಷಗಳಿಂದ ಸ್ನೇಹಿತ ಎಂದು ಹೇಳಿಕೊಂಡಿರುವ ಪ್ರಶಾಂತ್​ ಸಂಬರಗಿ ಮೈನಸ್​ ಒಂದು ಅಂಕ ಕೊಡುತ್ತಾರೆ.

ತೀರಾ ಡಾಮಿನೇಟಿಂಗ್​, ಭಾಷೆ ಬಂದ ಮಾತ್ರಕ್ಕೆ ಬೇರೆ ಟ್ಯಾಲೆಂಟ್​ನ್ನು ಮೀರಿಸಬಹುದು ಎಂದುಕೊಂಡಿದ್ದಾರೆ ಹೀಗೆ ಅನೇಕ ರೀತಿಯ ನೆಗೆಟಿವ್​ ಅಭಿಪ್ರಾಯಗಳನ್ನು ಮನೆ ಮಂದಿ ಹೇಳಿರುವುದನ್ನು ಕಾಣಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net