ಡೊಂಗರಗಾಂವ ಬಳಿ ಬಸ್ - ಬೈಕ್ ಡಿಕ್ಕಿ ಸ್ಥಳದಲ್ಲೇ ಮೂವರು ಸವಾರರ ಸಾವು

ಕಮಲಾಪುರ ತಾಲೂಕಿನ ಡೊಂಗರಗಾಂವ ಕ್ರಾಸ್ ಬಳಿ ಸೋಮವಾರ ಬೆಳಗ್ಗೆ ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಮೂವರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
IMG-20240527-WA0031
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾಂವ ಕ್ರಾಸ್ ಬಳಿ ಸೋಮವಾರ ಬೆಳಗ್ಗೆ ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಮೂವರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಿಣ್ಣಿಸಡಕ್ ಗ್ರಾಮದ ವಿಶಾಲ ಸಂಜಯಕುಮಾರ (೧೭), ಚಂದ್ರಕಾಂತ ನಿಂಗಪ್ಪ (೨೦) ಹಾಗೂ ಸಮೀರ ಜಮಿರೊದ್ದಿನ್ (೨೩) ಮೂವರು ಸ್ಥಳದಲ್ಲಿಯೇ ಮೃತಪಟ್ಡವರು.

ಕಲಬುರಗಿಯಿಂದ ಹುಮನಾಬಾದ ಕಡೆ ಹೊರಟಿದ್ದ ಬಸ್ ಗೆ ಕಿಣ್ಣಿಸಡಕ್ ನಿಂದ ಕಲಬುರಗಿ ಕಡೆಗೆ ಹೊರಟಿದ್ದ ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಎಎಸ್ಪಿಗಳಾದ ಶ್ರೀನಿಧಿ ಮತ್ತು ಬಿಂದುರಾಣಿ, ಪಿಎಸ್ ಐಗಳಾದ ಚಿದಾನಂದ ಸೌದಿ, ರಾಜಶೇಖರ ನಾಶಿ ಇತರರು ಭೇಟಿ ನೀಡಿ ಪರಿಶಿಲಿಸಿದರು. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net